ಅಹ್ಮದಾಬಾದ್: ರಾಜಸ್ಥಾನದ ನಿರುದ್ಯೋಗಿ ಯುವಕರು ನಗರದ ಕಾಂಗ್ರೆಸ್ ಭವನದ ಮುಂದೆ ರಾಜಸ್ಥಾನ ಮುಖ್ಯಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದ್ದಾರೆ.
ರಾಜಸ್ಥಾನದ ನಿರುದ್ಯೋಗಿ ಯುವಕರಿಂದ ಅಹಮದಾಬಾದ್ನಲ್ಲಿ ಪ್ರತಿಭಟನೆ.. - Etv Bharat Kannada
ರಾಜಸ್ಥಾನ ಮೂಲದ ನಿರುದ್ಯೋಗಿ ಯುವಕರು ಇಂದು ಅಹಮದಾಬಾದ್ನ ಕಾಂಗ್ರೆಸ್ ಭವನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ನಿರುದ್ಯೋಗಿ ಯುವಕರ ಪ್ರತಿಭಟನೆ
ಸುಮಾರು 200ಕ್ಕೂ ಹೆಚ್ಚು ಯುವಕರು ಉದ್ಯೋಗ ಸಿಗದ ಹಿನ್ನೆಲೆ ರಾಜಸ್ಥಾನದಿಂದ ಅಹ್ಮದಾಬಾದ್ ವರೆಗೆ ದಂಡಿಯಾತ್ರೆ ಮಾಡಿ ನಗರದ ಕಾಂಗ್ರೆಸ್ ಭವನದ ಮುಂದೆ ಸಿಎಂ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಯುವಕರು ಕಾಂಗ್ರೆಸ್ ಭವನ ಮುತ್ತಿಗೆ ಹಾಕಿದ್ದಾರೆ. ಕೂಡಲೇ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಸ್ಥಾನದ 33 ಜಿಲ್ಲೆಗಳಿಂದ ಯುವಕರು ದಂಡಿಯಾತ್ರೆ ಮೂಲಕ ಅಹಮದಾಬಾದ್ಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಮಂಡ್ಯ: ಟ್ರ್ಯಾಕ್ಟರ್, ಜಾನುವಾರುಗಳೊಂದಿಗೆ ರಸ್ತೆಗಿಳಿದು ರೈತರ ಪ್ರತಿಭಟನೆ