ನವದೆಹಲಿ: ದೇಶದಲ್ಲಿ 2005-06 ರಿಂದ 2019-20 ರ ನಡುವೆ ಸುಮಾರು 40 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಯುಎನ್ಡಿಪಿಯ ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ(ಎಂಪಿಐ) 2022ರ ವರದಿ ಉಲ್ಲೇಖಿಸಿ ಸರ್ಕಾರ ರಾಜ್ಯಸಭೆಯಲ್ಲಿ ಈ ಹೇಳಿಕೆ ನೀಡಿದೆ.
ಎನ್ಐಟಿಐ ಆಯೋಗ ಬಿಡುಗಡೆ ಮಾಡಿದ ಎಂಪಿಐ 2021ರ ಮೂಲ ವರದಿಯ ಪ್ರಕಾರ, ಶೇಕಡಾ. 25.01ರಷ್ಟು ಜನಸಂಖ್ಯೆ ಬಹು ಆಯಾಮದ ಬಡವರು ಎಂದು ಗುರುತಿಸಲಾಗಿದೆ. ಈ ವರದಿಯನ್ನು ಯೋಜನಾ ಸಚಿವಾಲಯದ ಕೇಂದ್ರ ರಾಜ್ಯ ಖಾತೆ ಸಚಿವ ರಾವ್ ಇಂದ್ರಜಿತ್ ಸಿಂಗ್ ರಾಜ್ಯಸಭೆಗೆ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ.
ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕ 2022 ರ ಪ್ರಕಾರ, ಭಾರತದಲ್ಲಿ 2005-06 ರಿಂದ 2019-21 ರ ನಡುವೆ 415 ಮಿಲಿಯನ್ ಅಂದರೆ 41ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಆಕ್ಸ್‌ಫರ್ಡ್ ಪಾವರ್ಟಿ, ಹ್ಯೂಮನ್ ಡೆವಲಪ್‌ಮೆಂಟ್ ಇನಿಶಿಯೇಟಿವ್ (ಒಪಿಎಚ್‌ಐ) ಮತ್ತು ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಮ್ (ಯುಎನ್‌ಡಿಪಿ) ಬಿಡುಗಡೆ ಮಾಡಿದ ವರದಿಯ ಆಧಾರದಲ್ಲಿ ಸಿಂಗ್ ಈ ಹೇಳಿಕೆಯನ್ನು ಸಂಸತ್ಗೆ ನೀಡಿದ್ದಾರೆ.