ಮುಂಬೈ (ಮಹಾರಾಷ್ಟ್ರ) : 1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆನನ್ ಸಮಾಧಿಗೆ ವಿದ್ಯುತ್ ದೀಪಾಲಂಕಾರ ಮಾಡಿ ಶೃಂಗಾರ ಮಾಡಿರುವ ವಿವಾದಕ್ಕೆ ಸಂಬಂಧಿಸಿದ್ದಂತೆ ಭೂಗತ ಪಾತಕಿ ಟೈಗರ್ ಮೆಮನ್ ಕಬ್ರಸ್ತಾನ್ ಟ್ರಸ್ಟ್‌ನ ಸದಸ್ಯರೊಬ್ಬರಿಗೆ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ.
ಮುಂಬೈನ ಬಡಾ ಸ್ಮಶಾನದಲ್ಲಿ ಯಾಕೂಬ್ ಮೆನನ್ ಸಮಾಧಿ ಇದ್ದು, ಇದಕ್ಕೆ ಅಮೃತಶಿಲೆ ಅಳವಡಿಸಿ ದೀಪಾಲಂಕಾರ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಇದು ವಿವಾದವನ್ನೂ ಹುಟ್ಟು ಹಾಕಿದೆ. ಇದೀಗ ವಿವಾದವು ಇತ್ಯರ್ಥವಾಗುತ್ತಿರುವಾಗಲೇ ಪಾತಕಿ ಟೈಗರ್ ಮೆನನ್ ಬೆದರಿಕೆ ಹಾಕಿರುವುದಾಗಿ ಗೊತ್ತಾಗಿದೆ.