ನವದೆಹಲಿ: ಆಪರೇಷನ್ ಸಂಕಲ್ಪ ಅಡಿ, ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ತರ್ಕಶ್ ತನ್ನ ಮೆರೈನ್ ಕಮಾಂಡೋಗಳೊಂದಿಗೆ ಪರ್ಷಿಯನ್ ಕೊಲ್ಲಿ ಮತ್ತು ಒಮನ್ ಕೊಲ್ಲಿಯ ಮೂಲಕ ಹಾದು ಹೋಗುವ ಭಾರತದ ವ್ಯಾಪಾರಿ ಹಡಗುಗಳು ಸುರಕ್ಷಿತವಾಗಿ ಸಾಗಿಸುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಸುತ್ತಿದೆ.
ಅರೇಬಿಯನ್ ಕೊಲ್ಲಿ ಮತ್ತು ಒಮನ್ ಕೊಲ್ಲಿಯಲ್ಲಿ ಈವರೆಗೆ 23 ಯುದ್ಧನೌಕೆಗಳನ್ನು ನಿಯೋಜಿಸಲಾಗಿದ್ದು, ಈ ಪ್ರದೇಶದ ಮೂಲಕ ಸಾಗುತ್ತಿರುವ ಭಾರತೀಯ ಧ್ವಜದ ವ್ಯಾಪಾರಿ ಹಡಗುಗಳಿಗೆ ಸುರಕ್ಷಿತ ಮಾರ್ಗ ಒದಗಿಸಲಾಗಿದೆ. ವ್ಯಾಪಾರಿ ಹಡಗುಗಳನ್ನು ರಕ್ಷಿಸಲು, ಕೊಲ್ಲಿ ಪ್ರದೇಶದಲ್ಲಿ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು 2019ರ ಜೂನ್‌ನಲ್ಲಿ ಅರೇಬಿಯನ್ ಕೊಲ್ಲಿ ಮತ್ತು ಒಮನ್ ಕೊಲ್ಲಿಯಲ್ಲಿ ‘ಆಪರೇಷನ್ ಸಂಕಲ್ಪ’ ಪ್ರಾರಂಭ ಮಾಡಲಾಗಿದೆ.