ಜಮ್ಮು:ಇಲ್ಲಿನರಂಬನ್‌ನ ಮೇಕರ್‌ಕೋಟೆ ಪ್ರದೇಶದ ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯ ಖೂನಿ ನಾಲಾದಲ್ಲಿ ಗುರುವಾರ ರಾತ್ರಿ ನಿರ್ಮಾಣ ಹಂತದ ಸುರಂಗ ಮಾರ್ಗದ ಒಂದು ಭಾಗ ಕುಸಿಯಿತು. ಪರಿಣಾಮ, ಕನಿಷ್ಠ 6 ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ನಾಲ್ವರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಭಾರತೀಯ ಸೇನೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು.
ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ಸುರಂಗ ಕುಸಿತ: ನಾಲ್ವರಿಗೆ ಗಾಯ, ಹಲವರು ಸಿಲುಕಿರುವ ಶಂಕೆ - ಜಮ್ಮು ಮತ್ತು ಕಾಶ್ಮೀರದಲ್ಲಿ ವಾಹನ ಸಂಚಾರ ಸ್ಥಗಿತ
ನಿರ್ಮಾಣ ಹಂತದ ಸುರಂಗ ಮಾರ್ಗವೊಂದು ಕುಸಿದು ಅವಶೇಷಗಳಡಿ ಸುಮಾರು ಆರು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಜಮ್ಮು-ಕಾಶ್ಮೀರದ ಹೆದ್ದಾರಿಯಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ.
ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿತ
Last Updated : May 20, 2022, 8:56 AM IST