ಕರ್ನಾಟಕ

karnataka

ETV Bharat / bharat

ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶ ಅಧಿಸೂಚನೆ ಅಂತಿಮಗೊಳಿಸಲು ಗಡುವು ನೀಡಿದ ಎನ್​ಜಿಟಿ - ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

ಡಿಸೆಂಬರ್ 31, 2021ರ ಇತ್ತೀಚಿನ ಅಧಿಸೂಚನೆಯಲ್ಲಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯವು ಪರಿಸರ (ರಕ್ಷಣೆ) ನಿಯಮಗಳು, 1986 ಅನ್ನು ತಿದ್ದುಪಡಿ ಮಾಡಿದ್ದು, ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಜೂನ್ 30, 2022 ರವರೆಗೆ ಹೊಸ ನಿಯಮಗಳನ್ನು ಜಾರಿಗೆ ತರಲು ಗಡುವನ್ನು ವಿಸ್ತರಿಸಿದೆ.

ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶ ಅಧಿಸೂಚನೆ ಅಂತಿಮಗೊಳಿಸಲು  ಗಡುವು ನೀಡಿದ ಎನ್​ಜಿಟಿ
ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶ ಅಧಿಸೂಚನೆ ಅಂತಿಮಗೊಳಿಸಲು ಗಡುವು ನೀಡಿದ ಎನ್​ಜಿಟಿ

By

Published : Jan 9, 2022, 10:59 PM IST

ಹೈದರಾಬಾದ್​​ : ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗೆ ಪರಿಹಾರ ಕ್ರಮಗಳಿಗಾಗಿ ಗಾಡ್ಗೀಳ್ ವರದಿ ಮತ್ತು ನಂತರ ನೇಮಕಗೊಂಡ ಉನ್ನತ ಮಟ್ಟದ ಡಾ. ಕೆ. ಕಸ್ತೂರಿರಂಗನ್ ಸಮಿತಿ ನೀಡಿದ ವರದಿಯ ಒಂದು ದಶಕದ ನಂತರವೂ ಇನ್ನೂ ಕೂಡ ಯಾವುದೇ ಪರಿಣಾಮಕಾರಿ ಕೆಲಸ ಮಾಡುತ್ತಿಲ್ಲ. ಇದರ ನಡುವೆ ಈಗ ನೂತನ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶಗಳ (ಇಎಸ್‌ಎ) ಅಧಿಸೂಚನೆಯನ್ನು ಅಂತಿಮಗೊಳಿಸಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ (ಎಂಒಇಎಫ್) ಇನ್ನೂ ಆರು ತಿಂಗಳ ಸಮಯವನ್ನು ನೀಡಿದೆ.

ಡಿಸೆಂಬರ್ 31, 2021 ರ ಇತ್ತೀಚಿನ ಅಧಿಸೂಚನೆಯಲ್ಲಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯವು ಪರಿಸರ (ರಕ್ಷಣೆ) ನಿಯಮಗಳು, 1986 ಅನ್ನು ತಿದ್ದುಪಡಿ ಮಾಡಿದ್ದು, ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಜೂನ್ 30, 2022 ರವರೆಗೆ ಹೊಸ ನಿಯಮಗಳನ್ನು ಜಾರಿಗೆ ತರಲು ಗಡುವನ್ನು ವಿಸ್ತರಿಸಿದೆ.

ಇದಕ್ಕೂ ಮೊದಲು ಡಿಸೆಂಬರ್ 2, 2020 ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಮುಂದೆ ಈ ಸಂಬಂಧ ವಿಚಾರಣೆ ನಡೆದಿದೆ. ಕೇಂದ್ರ ಪರಿಸರ ಸಚಿವಾಲಯವು ಉತ್ತರಿಸಿ, ಕೊರೊನಾ ಪರಿಸ್ಥಿತಿಯು ಮುಂದುವರಿದಿದೆ. ಉತ್ತಮ ಪ್ರಯತ್ನಗಳ ಹೊರತಾಗಿಯೂ, ಸಾರ್ವಜನಿಕ ಸಮಾಲೋಚನೆಗಳು ಮತ್ತು ಸಭೆಗಳನ್ನು ನಡೆಸುವುದು ಸೇರಿದಂತೆ ಆಯಾ ರಾಜ್ಯಗಳಲ್ಲಿನ ಕೆಲಸಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕೆಲವು ರಾಜ್ಯ ಸರ್ಕಾರಗಳು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ (ಇಎಸ್‌ಎ) ಅಧಿಸೂಚನೆಯನ್ನು ಅಂತಿಮಗೊಳಿಸಲು ಅಗತ್ಯವಾದ ಮಾಹಿತಿಯನ್ನು ಇನ್ನೂ ಒದಗಿಸಿಲ್ಲ. ಇತರ ಪರಿಸರ-ಸೂಕ್ಷ್ಮ ವಲಯ (ESZ) ಕರಡು ಅಧಿಸೂಚನೆಗಳ ಸಂದರ್ಭದಲ್ಲಿ ಆ ಮಾಹಿತಿಯು ರಾಜ್ಯಗಳಿಂದ ಬಾಕಿ ಉಳಿದಿದೆ ಎಂದು ಸಚಿವಾಲಯ ಹೇಳಿದೆ.

ಕೇರಳದಲ್ಲಿ ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಘಟ್ಟಗಳು ಒಟ್ಟು ಭೌಗೋಳಿಕ ಪ್ರದೇಶದ ಸುಮಾರು 56 ಪ್ರತಿಶತವನ್ನು ಆವರಿಸಿದೆ. ಭೂಕುಸಿತಗಳು ಮತ್ತು ಪ್ರವಾಹ ಪರಿಸ್ಥಿತಿಗಳು ಸೇರಿದಂತೆ ಪುನರಾವರ್ತಿತ ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿದೆ. ನೆರೆಯ ಕರ್ನಾಟಕ, ತಮಿಳುನಾಡು ಮತ್ತು ಪರ್ವತ ಶ್ರೇಣಿಗಳನ್ನು ಹಂಚಿಕೊಳ್ಳುವ ಇತರ ರಾಜ್ಯಗಳಲ್ಲಿ ತ್ವರಿತ ಹವಾಮಾನ ಬದಲಾವಣೆಗಳು ಕಂಡುಬಂದಿವೆ. ಈ ಸಂಬಂಧ ಕಸ್ತೂರಿರಂಗನ್ ವರದಿಯ ಗಮನಾರ್ಹ ಶಿಫಾರಸುಗಳನ್ನು ಮಾಡಿದೆ.

ಡಾ. ಕಸ್ತೂರಿರಂಗನ್ ಅವರು ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡಲ್ಲಿ ಹರಡಿರುವ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ನಿಷೇಧಿಸುವ 59,940 ಚ.ಕಿ.ಮೀ ಇಎಸ್ಎಗೆ ಶಿಫಾರಸ್ಸು ಮಾಡಿದ್ದರು.

ಕಾಲಕಾಲಕ್ಕೆ ಹೊರಡಿಸಲಾದ ಕರಡು ಅಧಿಸೂಚನೆಯಲ್ಲಿ 56,824.7 ಚ.ಕಿ.ಮೀ ವಿಸ್ತೀರ್ಣವನ್ನು ಪರಿಗಣಿಸಿವೆ. ಆ ಮೂಲಕ ಕೇರಳದಲ್ಲಿ 3114.3 ಚ.ಕಿ.ಮೀ ಪ್ರದೇಶ, ಕರ್ನಾಟಕದಲ್ಲಿ ಸುಮಾರು 20,668 ಚ.ಕಿ.ಮೀ ಒಳಗೊಂಡಂತೆ 1,576 ಹಳ್ಳಿಗಳನ್ನು ಇದರಲ್ಲಿ ಅಡಕ ಮಾಡಲಾಗಿದೆ.

ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಕೆಂಪು ವರ್ಗದ ಕೈಗಾರಿಕೆಗಳ ಸ್ಥಾಪನೆ ಮತ್ತು ಉಷ್ಣ ವಿದ್ಯುತ್ ಯೋಜನೆಗಳ ಮೇಲೆ ಸಂಪೂರ್ಣ ನಿಷೇಧವನ್ನು ವರದಿ ಶಿಫಾರಸು ಮಾಡಿದೆ. ಈ ಚಟುವಟಿಕೆಗಳಿಗೆ ಅನುಮತಿ ನೀಡುವ ಮೊದಲು ಮೂಲಸೌಕರ್ಯ ಯೋಜನೆಗಳು ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ಬೀರುವ ಪರಿಣಾಮವನ್ನು ಅಧ್ಯಯನ ಮಾಡಬೇಕು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕೇರಳದ ಕೋರಿಕೆಯ ಮೇರೆಗೆ 2013ರಲ್ಲಿಯೇ ಕೆಲವು ಪ್ರದೇಶಗಳನ್ನು ಹೊರಗಿಡಲಾಗಿದೆ ಎಂದು ಪರಿಸರ ಸಚಿವಾಲಯ ತಿಳಿಸಿದೆ. ಈ ಪ್ರದೇಶವು ಪ್ರಾಥಮಿಕವಾಗಿ ಇಡುಕ್ಕಿ ಪ್ರದೇಶಕ್ಕೆ ಸಂಬಂಧಿಸಿದೆ. ಅಲ್ಲಿ ಇತ್ತೀಚಿನ ವರ್ಷಗಳಲ್ಲಿ ಭೂಕುಸಿತಗಳು ಮತ್ತು ನೈಸರ್ಗಿಕ ವಿಕೋಪಗಳು ಕಂಡುಬಂದಿವೆ. ಆದ್ದರಿಂದ, ಅಂತಹ ಪ್ರದೇಶಗಳನ್ನು ಪಶ್ಚಿಮ ಘಟ್ಟಗಳ ಪರಿಸರ-ಸೂಕ್ಷ್ಮ ಪ್ರದೇಶದ ಉದ್ದೇಶಗಳಿಗಾಗಿ ಪರಿಗಣಿಸಬೇಕು. ಆದಾಗ್ಯೂ, ಅಂತಹ ಪ್ರದೇಶವನ್ನು ಇಎಸ್‌ಎ ಅಡಿಯಲ್ಲಿ ತರಲು, ಸಾರ್ವಜನಿಕ ಅಭಿಪ್ರಾಯವನ್ನು ಪಡೆಯಲು ಹೊಸ ಕರಡು ಅಧಿಸೂಚನೆಯನ್ನು ಹೊರಡಿಸುವ ಅಗತ್ಯವಿದೆ ಎಂದು ಅದು ಹೇಳಿದೆ.

ವಿವಿಧ ರಾಜ್ಯಗಳಿಂದ ಪ್ರತಿಭಟನೆ:

ಡಿಸೆಂಬರ್ 4, 2021 ರಂದು ಕೇಂದ್ರ ಪರಿಸರ, ಅರಣ್ಯ ಮತ್ತು ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಅಧ್ಯಕ್ಷತೆಯಲ್ಲಿ ಕಸ್ತೂರಿರಂಗನ್ ವರದಿಯ ಅನುಷ್ಠಾನದ ಕುರಿತು ನಡೆದ ವಾಸ್ತವ ಸಭೆಯಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪ್ರದೇಶದ ಜನರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಉಲ್ಲೇಖಿಸಿದ್ದರು. ಸಭೆಯಲ್ಲಿ ಬೊಮ್ಮಾಯಿ ರಾಜ್ಯದ ನಿಲುವನ್ನು ಬಲವಾಗಿ ಮಂಡಿಸಿದ್ದರು. ಕಸ್ತೂರಿರಂಗನ್ ವರದಿಯನ್ನು ವಿರೋಧಿಸಲು ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿರುವ ಬಗ್ಗೆ ಸಭೆಯಲ್ಲಿ ಪಾಲ್ಗೊಂಡವರ ಗಮನ ಸೆಳೆದಿದ್ದರು.

ಕರ್ನಾಟಕವು ವ್ಯಾಪಕವಾದ ಅರಣ್ಯವನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆಯನ್ನು ರಕ್ಷಿಸಲು ನಮ್ಮ ಸರ್ಕಾರವು ತೀವ್ರ ಕಾಳಜಿ ವಹಿಸಿದೆ. ಈ ಪ್ರದೇಶದ ಜನರು ಪರಿಸರ ಸ್ನೇಹಿ ರೀತಿಯಲ್ಲಿ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆಗಳನ್ನು ಅಳವಡಿಸಿಕೊಂಡಿದ್ದಾರೆ. ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಮತ್ತೊಂದು ಕಾನೂನು ತರುವುದು ಸೂಕ್ತವಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು.

ಕಸ್ತೂರಿರಂಗನ್ ವರದಿಯನ್ನು ಉಪಗ್ರಹ ಚಿತ್ರಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಆದರೆ ನೆಲದ ವಾಸ್ತವತೆ ವಿಭಿನ್ನವಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.

ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ಈ ವಿಷಯವು ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಪ್ರತಿರೋಧವನ್ನು ಹುಟ್ಟುಹಾಕಿದೆ. ಚರ್ಚ್ ಮುಖಂಡರು ರಾಜ್ಯದ ಹೆಚ್ಚಿನ ಶ್ರೇಣಿಗಳಲ್ಲಿ ಪ್ರತಿಭಟನಾನಿರತ ರೈತರನ್ನು ಬೆಂಬಲಿಸುವುದರೊಂದಿಗೆ ಅವರ ಬೆನ್ನ ಹಿಂದೆ ನಿಂತಿದ್ದಾರೆ.

ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ (ಕೆಸಿಬಿಸಿ) ಅಧ್ಯಕ್ಷ ಕಾರ್ಡಿನಲ್ ಮಾರ್ ಜಾರ್ಜ್ ಅಲೆಂಚೆರಿ ಅವರು ಕೇಂದ್ರ ಸಚಿವ ಯಾದವ್ ಅವರಿಗೆ ಪತ್ರ ಬರೆದು, ಕಸ್ತೂರಿರಂಗನ್ ವರದಿಯ ಅನುಷ್ಠಾನದ ಅಂತಿಮ ಅಧಿಸೂಚನೆಯನ್ನು ವಿಸ್ತರಿಸಲು ಮತ್ತು ಭೌಗೋಳಿಕ ನಿರ್ದೇಶಾಂಕಗಳನ್ನು ಮರುಹೊಂದಿಸಲು ರಾಜ್ಯಕ್ಕೆ ಸಮಯ ನೀಡಬೇಕು ಎಂದು ಒತ್ತಾಯಿಸಿದ್ದರು.

ABOUT THE AUTHOR

...view details