ಚಂಡೀಗಢ(ಪಂಜಾಬ್):ರಾಜ್ಯದಲ್ಲಿ ಚುನಾವಣಾ ಕಾವು ಏರಿದೆ. ಈ ಮಧ್ಯೆ 1.74 ಕೋಟಿ ರೂಪಾಯಿ ಅಕ್ರಮ ಹಣ, 1,088 ಕೆಜಿ ಮಾದಕ ವಸ್ತು, 11 ಕೆ.ಜಿ ಅಫೀಮ್, 3,370 ಗ್ರಾಂ ಹೆರಾಯಿನ್ ಅನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಎಸ್. ಕರುಣಾ ರಾಜು ತಿಳಿಸಿದ್ದಾರೆ.
ಡ್ರಗ್ಸ್ ಸಾಗಣೆ ಸೇರಿದಂತೆ ಪ್ರಚೋದನಾಕಾರಿ ಚಟುವಟಿಕೆಗಳ ಮೇಲೆ ನಿಗಾ ಇರಿಸಲು 2,268 ವಲಯ ಗಸ್ತು ತಂಡಗಳು, 740 ಕಣ್ಗಾವಲು ತಂಡಗಳು, 792 ಫ್ಲೈಯಿಂಗ್ ಸ್ಕ್ವಾಡ್‌ಗಳು, 351 ವಿಡಿಯೋ ಕಣ್ಗಾವಲು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.