ಉನಾ(ಹಿಮಾಚಲ ಪ್ರದೇಶ): ಮನೆಯಲ್ಲಿ ಹಣಕಾಸಿನ ತೊಂದರೆಯಿಂದಾಗಿ 19 ವರ್ಷದ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಿಮಾಚಲ ಪ್ರದೇಶದ ಉನಾದಲ್ಲಿ ನಡೆದಿದೆ. ಬಿಸಿಎ ವ್ಯಾಸಂಗ ಮಾಡ್ತಿದ್ದ ಸುಮನ್ ಮೃತಪಟ್ಟ ಯುವತಿ.
ಪ್ರಕರಣದ ವಿವರ: ಜಗದೀಶ್ ಸಿಂಗ್ ಹಾಗೂ ಪತ್ನಿ ಪೂನಂಗೆ ಮೂವರು ಹೆಣ್ಣು ಮಕ್ಕಳು. ಸುಮನ್ ದೊಡ್ಡವಳು. ಅಧ್ಯಯನದಲ್ಲಿ ಚುರುಕಾಗಿದ್ದ ಈಕೆ ಬಿಸಿಎ ವ್ಯಾಸಂಗ ಮಾಡ್ತಿದ್ದಳು. ದಿನಗೂಲಿ ಕೆಲಸ ಮಾಡ್ತಿದ್ದ ಜಗದೀಶ್ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ದುಡಿಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಹೀಗಾಗಿ, ಮನೆಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.
ತಂದೆಯ ಕಾಯಿಲೆಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಔಷಧಿಗೋಸ್ಕರ ಖರ್ಚು ಮಾಡಬೇಕಾದ ಪರಿಸ್ಥಿತಿ ತಲೆದೋರಿದೆ. ಸಂಬಂಧಿಕರು ಸಹಾಯಕ್ಕೆ ಬರಲಿಲ್ಲ. ಹೀಗಾಗಿ, ಬೇರೆ ದಾರಿ ಕಾಣದೆ ಹಿರಿಮಗಳು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳುತ್ತಾಳೆ.