ಲಖನೌ (ಉತ್ತರಪ್ರದೇಶ): ಉಮೇಶ್ ಪಾಲ್ ಹತ್ಯೆ ಪ್ರಕರಣದ ಸಂಚು ಬರೇಲಿ ಜೈಲಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ ಯಾರು ಏನು ಮಾಡಬೇಕು ಎಂಬುದನ್ನು ಆರೋಪಿಗಳು ಜೈಲಿನಲ್ಲಿಯೇ ನಿರ್ಧರಿಸಿದ್ದರು. ಉಮೇಶ್ ಪಾಲ್ ಹತ್ಯೆ ಮಾಡುವ ಮುನ್ನ ಅತಿಕ್ ಅಹಮದ್ನ ಸಹೋದರರನ್ನು ಭೇಟಿ ಮಾಡಲು ಎಲ್ಲ ಶೂಟರ್ ಗಳು ಜೈಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ಕಳೆದ ಫೆಬ್ರವರಿ 24 ರಂದು ಪ್ರಯಾಗ್ರಾಜ್ನ ಧುಮನ್ಗಂಜ್ನಲ್ಲಿ ಉಮೇಶ್ ಪಾಲ್ ಹತ್ಯೆ ನಡೆದಿತ್ತು. ಘಟನೆಯಲ್ಲಿ ಉಮೇಶ್ ಪಾಲ್ ಸೇರಿ ಅವರ ಭದ್ರತಾ ಸಿಬ್ಬಂದಿಗಳಾದ ಸಂದೀಪ್ ನಿಶಾದ್ ಮತ್ತು ರಾಘವೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಉಮೇಶ್ ಪಾಲ್ ಅವರ ಪತ್ನಿ ಜಯಪಾಲ್ ಧುಮನ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಅತಿಕ್ ಅಹ್ಮದ್, ಅತಿಕ್ನ ಸಹೋದರ ಅಶ್ರಫ್, ಅತಿಕ್ನ ಹೆಂಡತಿ ಸಾಯಿಸ್ತಾ ಪರ್ವೀನ್ ಸೇರಿ ಒಟ್ಟು ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಪ್ರಕರಣ ಪ್ರಮುಖ ಆರೋಪಿಗಳಾದ ಶೂಟರ್ ಅರ್ಬಾಜ್ ಮತ್ತು ವಿಜಯ್ ಅಲಿಯಾಸ್ ಉಸ್ಮಾನ್ ಎಂಬವರನ್ನು ಎನ್‌ಕೌಂಟರ್ ಮಾಡಿದ್ದಾರೆ. ಈ ಹತ್ಯೆ ನಡೆಸಲು ಮುಸ್ಲಿಂ ಹಾಸ್ಟೆಲ್ನಲ್ಲಿ ಯೋಜನೆ ರೂಪಿಸಿದ್ದ ಸದಾಕತ್ ಖಾನ್ನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಉಮೇಶ್ ಪಾಲ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಗಳು, ಹತ್ಯೆಯ 13 ದಿನಗಳ ಹಿಂದೆ ಅಂದರೆ ಫೆಬ್ರವರಿ 11ರಂದು ಅತಿಕ್ ಮಗ ಅಸಾದ್ ಮತ್ತು ಗುಲಾಮ್, ಮತ್ತು ವಿಜಯ್ ಅಲಿಯಾಸ್ ಉಸ್ಮಾನ್ ಅಶ್ರಫ್ನನ್ನು ಭೇಟಿಯಾಗಿದ್ದ. ಅಷ್ಟೇ ಅಲ್ಲದೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬರೇಲಿ ಜೈಲಿನಲ್ಲೇ ಆರೋಪಿಗಳು ಉಮೇಶ್ ಪಾಲ್ನನ್ನು ಕೊಲ್ಲಲು ಮತ್ತು ಬಳಿಕ ತಲೆಮರೆಸಿಕೊಳ್ಳಲು ಯೋಜನೆ ರೂಪಿಸಿದ್ದರು. ಅಲ್ಲದೇ ಈ ಬಗ್ಗೆ ಬರೇಲಿ ಜೈಲಿನಲ್ಲಿ ಅಶ್ರಫ್ ಜೊತೆ ನಡೆಸಿರುವ ಮಾತುಕತೆ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಉಸ್ಮಾನ್ ಸಂಚಿನಲ್ಲಿ ಗುಲಾಂ ಭಾಗಿ: ಅತೀಕ್ ಗ್ಯಾಂಗ್ಗೆ ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್‌ನನ್ನು ಗುಲಾಂ ಕರೆತಂದಿದ್ದ. ಉಮೇಶ್ ಪಾಲ್ ಹತ್ಯೆಯ ಸಂಚಿನಲ್ಲಿ ಗುಲಾಂ, ವಿಜಯ್ ಅಲಿಯಾಸ್ ಉಸ್ಮಾನ್‌ನನ್ನು ಸೇರಿಕೊಂಡಿದ್ದ. ಈ ಉಸ್ಮಾನ್ ಇಲ್ಲಿಯವರೆಗೆ ಯಾವುದೇ ಪ್ರಮುಖ ಅಪರಾಧದಲ್ಲಿ ಅತೀಕ್ನನ್ನು ಬೆಂಬಲಿಸಿರಲಿಲ್ಲ ಎಂದು ತಿಳಿದು ಬಂದಿದೆ. ಹತ್ಯೆ ಪ್ರಕರಣದಲ್ಲಿ ಪೊಲೀಸರು ಅಸದ್, ಗುಲಾಮ್, ಗುಡ್ಡು ಮುಸ್ಲಿಂ, ಅರ್ಮಾನ್ ಮತ್ತು ಅರ್ಬಾಜ್ನನ್ನು ಗುರುತಿಸಿದ್ದರು. ಮತ್ತೊರ್ವ ಆರೋಪಿ ವಿಜಯ್ ಅಲಿಯಾಸ್ ಉಸ್ಮಾನ್ನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಬಳಿಕ ನೂರಾರು ಫೋನ್ ಕರೆಗಳನ್ನು ಪರಿಶೀಲಿಸಿದ ನಂತರ ಉಸ್ಮಾನ್‌ನನ್ನು ಗುರುತಿಸಲಾಗಿತ್ತು. ಸದ್ಯ ಪೊಲೀಸರು ಇಬ್ಬರನ್ನು ಎನ್ ಕೌಂಟರ್ ಮಾಡಿದ್ದಾರೆ.
ಇದನ್ನೂ ಓದಿ :ಉಮೇಶ್ ಪಾಲ್ ಹತ್ಯೆ ಪ್ರಕರಣ: ಶೂಟರ್ ವಿಜಯ್ ಚೌಧರಿ ಎನ್‌ಕೌಂಟರ್..!