ಪ್ರಯಾಗರಾಜ್:ಫೆಬ್ರವರಿ 24ರಂದು ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಸೋಮವಾರ ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ್ದಾರೆ. ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತರಾದ ಶೂಟರ್‌ನ ಹೆಸರು ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್.
ವಿಜಯ್ ಚೌಧರಿ ಅದೇ ಶೂಟರ್ ಎಂದು ಹೇಳಲಾಗಿದೆ. ಘಟನೆಯಲ್ಲಿ ಸ್ಥಳಕ್ಕಾಗಮಿಸಿದ ಉಮೇಶ್ ಪಾಲ್ ಮೇಲೆ ಮೊದಲು ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಅಷ್ಟೇ ಅಲ್ಲ, ಉಮೇಶ್ ಪಾಲ್ ಜೊತೆಗೆ ಉಸ್ಮಾನ್ ಕೂಡ ಸಂದೀಪ್ ನಿಶಾದ್ ಎಂಬ ಕಾನ್ ಸ್ಟೇಬಲ್ ಮೇಲೆಯೂ ಗುಂಡು ಹಾರಿಸಿದ್ದನು. ಘಟನೆಯಲ್ಲಿ ಭಾಗಿಯಾಗಿರುವ ಉಸ್ಮಾನ್‌ಗೆ ಪತ್ತೆಗಾಗಿ 50,000 ರೂಪಾಯಿ ಬಹುಮಾನವನ್ನೂ ಪೊಲೀಸರು ಘೋಷಿಸಿದ್ದರು. ಕೌಂಧಿಯಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆದ್ದಾರಿ ಬದಿಯಲ್ಲಿ ಪೊಲೀಸರು ಮತ್ತು ಶೂಟರ್ ನಡುವೆ ಎನ್‌ಕೌಂಟರ್ ನಡೆದಿದೆ.
ಏನು ಹೇಳುತ್ತೆ ಪೊಲೀಸ್ ಮಾಹಿತಿ?: ಸಿಕ್ಕಿರುವ ಮಾಹಿತಿ ಪ್ರಕಾರ, ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಶೂಟರ್ ಉಸ್ಮಾನ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಒಂದು ವಾರದಿಂದ ಕೌಂಡಿಯಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದ್ದರು. ಅದೇ ವೇಳೆ ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ ಪರಾರಿಯಾಗಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇದರ ನಂತರ, ಪೊಲೀಸರು ಮತ್ತು ಅಪರಾಧ ವಿಭಾಗದ ತಂಡವು ಇಡೀ ಪ್ರದೇಶದಲ್ಲಿ ಸುತ್ತುವರೆದು, ಹೆಚ್ಚವರಿಯಾಗಿ ಗಸ್ತು ತಿರುಗಲು ಪ್ರಾರಂಭಿಸಿದ್ದರು.
ಅದೇ ವೇಳೆಗೆ ಪೊಲೀಸರು ಉಸ್ಮಾನ್‌ಗೆ ಮುಖಾಮುಖಿಯಾದರು. ಇದಾದ ಬಳಿಕ ಪೊಲೀಸರನ್ನು ಕಂಡ ಉಸ್ಮಾನ್ ಓಡಲಾರಂಭಿಸಿದ. ಪೊಲೀಸರು ಆತನನ್ನು ಬೆನ್ನಟ್ಟಿದಾಗ ಪೊಲೀಸ್ ತಂಡವು ಆತನ ಮೇಲೆ ಗುಂಡು ಹಾರಿಸಿದೆ. ಇದರ ನಂತರ, ಪೊಲೀಸರು ಎನ್ಕಂಟರ್ನಲ್ಲಿ ವಿಜಯ್ ಚೌಧರಿ ಕೊಂದು ಹಾಕಿದ್ದಾರೆ. ಆದರೆ, ಆತನ ಸಹಚರನೊಬ್ಬ ಪರಾರಿಯಾಗಿದ್ದಾನೆ. ಉಸ್ಮಾನ್ ಅಲಿಯಾಸ್ ವಿಜಯ್ ಚೌಧರಿ ಕೌಂಧಿಯಾರ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋಖರ್ ಪ್ರದೇಶದ ನಿವಾಸಿಯಾಗಿದ್ದ. ಪ್ರಾಥಮಿಕ ಮಾಹಿತಿ ಪ್ರಕಾರ ಉಸ್ಮಾನ್ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.