ನವದೆಹಲಿ: ರಷ್ಯಾ ನಡೆಸಿದ ಬಾಂಬ್ ಹಾಗೂ ಶೆಲ್ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಕನಿಷ್ಠ 16 ಮಕ್ಕಳು ಸಾವನ್ನಪ್ಪಿದ್ದಾರೆ. ನಾಗರಿಕರ ಸಾವು-ನೋವು ಅಪಾರವಾಗಿದೆ ಎಂದು ಭಾರತದಲ್ಲಿನ ಉಕ್ರೇನ್ ರಾಯಭಾರಿ ಡಾ. ಇಗೊರ್ ಪೊಲಿಖಾ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಸಮಯದಲ್ಲಿ ನಮ್ಮ ದೇಶದ 16 ಮಕ್ಕಳು ಸಾವನ್ನಪ್ಪಿದ್ದಾರೆ. ವಿವಿಧ ದೇಶಗಳ ನಿರ್ಬಂಧಗಳಿಂದಾಗಿ ರಷ್ಯಾದ ಆರ್ಥಿಕತೆಯು ಪ್ರತಿದಿನವೂ ದುರ್ಬಲಗೊಳ್ಳುತ್ತಿದೆ. ಇದುವರೆಗೆ ಸುಮಾರು 5,300 ರಷ್ಯಾದ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ರಷ್ಯಾದ ವಿಮಾನಗಳಿಗಾಗಿ ಯುರೋಪಿನ ವಾಯುಪ್ರದೇಶವನ್ನು ಭಾನುವಾರ ಮುಚ್ಚಲಾಗಿದೆ. ಆ ದೇಶದ ಆರ್ಥಿಕತೆಯು ಪ್ರತಿದಿನ ದುರ್ಬಲಗೊಳ್ಳುತ್ತಿದೆ. ರಷ್ಯಾವು ಸಂಪೂರ್ಣವಾಗಿ ಸಾವುನೋವುಗಳನ್ನು ಎದುರಿಸುತ್ತಿದೆ. ಸರಿಸುಮಾರು 5,300 ರಷ್ಯಾದ ಸೈನಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಎಲ್ಲಾ ವಿದೇಶಿ ಪಾಲುದಾರ ರಾಷ್ಟ್ರಗಳು ಯುದ್ಧ ನಿಲ್ಲಿಸಲು ವ್ಲಾಡಿಮಿರ್ ಪುಟಿನ್ ಮೇಲೆ ಒತ್ತಡ ಹೇರಬೇಕು ಎಂದು ಇದೇ ವೇಳೆ ಉಕ್ರೇನ್ ರಾಯಭಾರಿ ವಿನಂತಿಸಿದ್ದಾರೆ.