ಕರ್ನಾಟಕ

karnataka

ETV Bharat / bharat

Ukrainian woman: ಉತ್ತರ ಪ್ರದೇಶದ ಲಖನೌನಲ್ಲಿ ಉಕ್ರೇನ್ ದೇಶದ ಮಹಿಳೆ ಶವವಾಗಿ ಪತ್ತೆ - woman has been found dead at her in laws house

ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾದ ಉಕ್ರೇನಿಯನ್ ಮಹಿಳೆಯ ಶವ ಲಖನೌನಲ್ಲಿರುವ ಆಶಿಯಾನಾ ಪ್ರದೇಶದಲ್ಲಿರುವ ಪತ್ತೆಯಾಗಿದೆ. ಉಕ್ರೇನ್ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ.

Ukrainian woman found dead
ಮಹಿಳೆಯ ಶವ ಪತ್ತೆ

By

Published : Jun 18, 2023, 8:48 AM IST

ಲಖನೌ (ಉತ್ತರ ಪ್ರದೇಶ) : ಲಖನೌ ನಗರದ ಆಶಿಯಾನಾ ಪ್ರದೇಶದಲ್ಲಿರುವ ತನ್ನ ಅತ್ತೆಯ ಮನೆಯಲ್ಲಿ 27 ವರ್ಷದ ಉಕ್ರೇನ್ ದೇಶದ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಒಕ್ಸಾನಾ ಮಂಚಾರ್ ಎಂಬಾಕೆ ಆಶಿಯಾನಾದ ಜೂಡ್ ಆಗಸ್ಟಿನ್ ಎಂಬಾತನನ್ನು ಮದುವೆಯಾಗಿದ್ದರು. ಜೂನ್ 14 ರಂದು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

"ಒಕ್ಸಾನಾ ಅವರು ಮನೆಯ ಎರಡನೇ ಮಹಡಿಯಲ್ಲಿ ಸ್ಟೋರ್ ರೂಂ ಕಡೆಗೆ ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪಡೆದುಕೊಂಡಿದ್ದೇವೆ. ಜೊತೆಗೆ, ಆಕೆಯ ಅತ್ತೆ ಮೀನು ಸೇರಿದಂತೆ ಮನೆಯ ಇತರೆ ಸದಸ್ಯರು ಕೂಡ ಕಂಡುಬಂದಿದ್ದಾರೆ. ಅತ್ತಿಗೆ ಯುಲನ್ ಕೆಳ ಮಹಡಿಯಲ್ಲಿ ಮಲಗಿದ್ದರು" ಎಂದು ಕಂಟೋನ್ಮೆಂಟ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅಭಿನವ್ ಯಾದವ್ ಮಾಹಿತಿ ನೀಡಿದ್ದಾರೆ.

ಸ್ಟೋರ್ ರೂಂ ಬಾಗಿಲು ಒಳಗಿನಿಂದ ಲಾಕ್ ಆಗಿದ್ದು, ಅದನ್ನು ಮುರಿದು ನೋಡಿದಾಗ ಒಕ್ಸಾನಾ ಕಿಟಕಿಯ ಕಬ್ಬಿಣದ ಗ್ರಿಲ್‌ನಿಂದ ಕುತ್ತಿಗೆಗೆ ಬೆಡ್‌ಶೀಟ್ ಕಟ್ಟಿಕೊಂಡು ನೇಣು ಬಿಗಿದುಕೊಂಡಿದ್ದರು. ಕೂಡಲೇ ಆಕೆಯನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲಿನ ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ನಾವು ಉಕ್ರೇನ್ ರಾಯಭಾರ ಕಚೇರಿ ಮತ್ತು ಒಕ್ಸಾನಾ ತಂದೆಗೆ ಮಾಹಿತಿ ನೀಡಿದ್ದೇವೆ. ಭಾನುವಾರ ವೈದ್ಯರ ಸಮಿತಿ ಮರಣೋತ್ತರ ಪರೀಕ್ಷೆ ನಡೆಸಲಿದೆ" ಎಂದು ಎಸಿಪಿ ಹೇಳಿದರು.

ಇದನ್ನೂ ಓದಿ :ಮಹಿಳಾ ಹಾಸ್ಟೆಲ್‌ನಲ್ಲಿ ನಗ್ನ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ ; ಶಂಕಿತ ಆರೋಪಿ ಆತ್ಮಹತ್ಯೆ

ಅಮೆರಿಕದಲ್ಲಿ ಗುಂಡಿನ ದಾಳಿ : ನಿನ್ನೆ ಅಮೆರಿಕದ ಸೆಕ್ವಾಚಿಯ ಟೆನ್ನೆಸ್ಸಿ ಎಂಬಲ್ಲಿನ ಒಂಟಿ ಮನೆಯ ಮೇಲೆ ನಡೆದ ಗುಂಡಿನ ದಾಳಿ ನಡೆದು ಮೂವರು ಮಕ್ಕಳು ಸೇರಿದಂತೆ 6 ಮಂದಿ ಶವವಾಗಿ ಪತ್ತೆಯಾಗಿದ್ದರು. ಮನೆಗೆ ಬೆಂಕಿ ಹಚ್ಚಲಾಗಿದ್ದು, ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ 7ನೇ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಗುಂಡಿನ ದಾಳಿ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಕೌಟುಂಬಿಕ ಕಾರಣಕ್ಕೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ :ಸೆಕ್ವಾಚಿಯ ಮನೆಯೊಂದರಲ್ಲಿ 6 ಮಂದಿ ಶವ ಪತ್ತೆ : ಗುಂಡೇಟಿನಿಂದ ಸಾವು, ಮನೆಗೂ ಬೆಂಕಿ

ಯುವತಿ ಶವ ಪತ್ತೆ : ಕಳೆದ ಜೂನ್​ 6ನೇ ತಾರೀಖಿನಂದು ಬೆಂಗಳೂರಿನ ಜೀವನ್ ಭೀಮಾ ನಗರ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿತ್ತು. ಹೈದರಾಬಾದ್ ಮೂಲದ ಆಕಾಂಕ್ಷಾ (23) ಎಂಬುವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಪ್ರಿಯಕರ ಅರ್ಪಿತ್ ಎಂಬಾತನೇ ಕೊಲೆ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿತ್ತು.

ಇದನ್ನೂ ಓದಿ :ಬೆಂಗಳೂರಲ್ಲಿ ಹೈದರಾಬಾದ್ ಮೂಲದ ಯುವತಿ ಶವ ಪತ್ತೆ : ಪ್ರಿಯಕರ ನಾಪತ್ತೆ

ABOUT THE AUTHOR

...view details