ಕರ್ನಾಟಕ

karnataka

ETV Bharat / bharat

ಹಸಿವಿನಿಂದ ಬಳಲುತ್ತಿರುವ ಅನಾಥ ಮಕ್ಕಳು: 16 ಸಾವಿರ ರಷ್ಯಾ ಸೈನಿಕರ ಕೊಂದಿದ್ದೇವೆ ಎಂದ ಉಕ್ರೇನ್​

ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಒಂದು ತಿಂಗಳು ಕಳೆದಿದೆ. ಇಂದು ಯುದ್ಧದ 31 ನೇ ದಿನ. ಹೋರಾಟ ಮುಂದುವರಿದಿದೆ. ಉಕ್ರೇನ್‌ನಲ್ಲಿನ ವಿನಾಶದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮೌನ ಮುರಿದಿದ್ದಾರೆ. ಇತ್ತಿಚೇಗೆ ಪೋಲಿಷ್ ಗಡಿಗೆ ಕಳುಹಿಸಲಾದ ಸಾವಿರಾರು ಅಮೆರಿಕ ಸೈನಿಕರನ್ನು ಭೇಟಿಯಾಗಿದ್ದಾರೆ.

Ukraine says 300 died in theatre attack  hunger grips cities in UKraine  Ukraine crisis,  Ukraine Russia war  ಥಿಯೇಟರ್​ ದಾಳಿಯಲ್ಲಿ 300 ಜನ ಸಾವು ಎಂದ ಉಕ್ರೇನ್​ ಉಕ್ರೇನ್​ನಲ್ಲಿ ಹಸಿವುನಿಂದ ಬಳಲುತ್ತಿರುವ ಜನ  ಉಕ್ರೇನ್​ ಬಿಕ್ಕಟ್ಟು  ಉಕ್ರೇನ್​ ರಷ್ಯಾ ಯುದ್ಧ
16 ಸಾವಿರ ಸೈನಿಕರನ್ನು ಹೊಡೆದುರುಳಿಸಿದ್ದೇವೆ ಎಂದ ಉಕ್ರೇನ್​

By

Published : Mar 26, 2022, 1:03 PM IST

ಕೀವ್: ಉಕ್ರೇನ್​ ಮೇಲೆ ರಷ್ಯಾ ನಡೆಸುತ್ತಿದ್ದ ಭೀಕರ ದಾಳಿಯಲ್ಲಿ ಸಂಭವಿಸುತ್ತಿರುವ ನಷ್ಟಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈ ತಿಂಗಳು 16ರಂದು ಮರಿಯುಪೋಲ್​​ನ ಥಿಯೇಟರ್​ ಮೇಲೆ ರಷ್ಯಾ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು 300ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್​ ಅಧಿಕಾರಿಗಳು ಹೇಳಿದ್ದಾರೆ.

1300 ನಿರಾಶಿತರ ಮೇಲೆ ದಾಳಿ: ಪ್ರತ್ಯಕ್ಷ ಸಾಕ್ಷಿಗಳು ನೀಡಿದ ವಿವರಗಳ ಆಧಾರದ ಮೇಲೆ ಸ್ಥಳೀಯ ಅಧಿಕಾರಿಗಳು ಟೆಲಿಗ್ರಾಂ ಚಾನೆಲ್​ ಮೂಲಕ ಮಾಹಿತಿ ನೀಡಿದ್ದಾರೆ. ಬಹಳಷ್ಟು ಮಕ್ಕಳು ಈ ಥಿಯೇಟರ್​ನಲ್ಲಿ ಆಶ್ರಯ ಪಡೆಯುತ್ತಿದ್ದರು. ಅವರನ್ನು ಕಾಪಾಡುವ ಸಲುವಾಗಿ ‘ಬಿಲ್ಡ್ರನ್​’ ಎಂಬ ರಷ್ಯಾ ಭಾಷೆಯಲ್ಲಿ ಬೋರ್ಡ್​ ಸಹ ಹಾಕಿದ್ದೆವು.

ರಷ್ಯಾ ದಾಳಿಯಲ್ಲಿ ಮನೆಗಳನ್ನು ಕಳೆದುಕೊಂಡ ಸುಮಾರು 1300 ನಿರಾಶಿತರು ಇಲ್ಲೇ ಆಶ್ರಯ ಪಡೆಯುತ್ತಿದ್ದಾರೆ. ಆದರೂ ಸಹ ಪುಟಿನ ಸೈನಿಕರು ನಿರ್ಧಾಕ್ಷಿಣ್ಯವಾಗಿ ಈ ಶಿಬಿರದ ಮೇಲೆ ದಾಳಿ ನಡೆಸಿದರು ಎಂದು ಉಕ್ರೇನ್​ ಸಂಸತ್​ಗೆ ಸೇರಿದ ಮಾನವ ಹಕ್ಕುಗಳ ಆಯುಕ್ತ ಲುಡ್ಮಿಲಾ ಡೆನಿಪೋವಾ ಕುಗ್ಗಿಹೋದರು.

ಖರ್ಗಿವ್​ನಲ್ಲಿ ಅನಾಥ ಮಕ್ಕಳ ನರಳಾಟ:ಖರ್ಗಿವ್​ ಮೇಲೆ ರಷ್ಯಾ ಸೈನಿಕರು ದಾಳಿ ಮಾಡಿದ್ದಾರೆ. ಎಲ್ಲಂದರಲ್ಲೇ ಶವಗಳು ಗುಂಪು - ಗುಂಪಾಗಿ ಕಾಣಿಸುತ್ತಿವೆ. ಸ್ಥಳೀಯರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಈಗ ಅಲ್ಲಿ ಹೆಚ್ಚಾಗಿ ವೃದ್ಧರೇ ಕಾಣಿಸುತ್ತಿದ್ದಾರೆ. ಆಹಾರ, ನೀರು, ನಿತ್ಯ ಬಳಿಸುವ ವಸ್ತುಗಳಿಗಾಗಿ ಹೊರ ಬರುತ್ತಿದ್ದಾರೆ. ಯುದ್ಧದಲ್ಲಿ ತಂದ - ತಾಯಿಯನ್ನು ಕಳೆದುಕೊಂಡ ಮಕ್ಕಳು ಆಹಾರಕ್ಕಾಗಿ ಅವಶೇಷಗಳಡಿ ಹುಡುಕಾಟ ನಡೆಸುತ್ತಿರುವುದು ಮನಕಲುಕುವಂತಾಗಿದೆ.

ಓದಿ:ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್​ ಸ್ಕೂಟರ್​ನಲ್ಲಿ ಬೆಂಕಿ, ಮಲಗಿದ್ದ ತಂದೆ-ಮಗಳು ಉಸಿರುಗಟ್ಟಿ ಸಾವು!

16,000 ರಷ್ಯಾ ಸೈನಿಕರ ಸಾವು:ಉಕ್ರೇನ್‌ನಲ್ಲಿ ನಡೆದ ಯುದ್ಧದಲ್ಲಿ 1,351 ಸೈನಿಕರು ಸಾವನ್ನಪ್ಪಿದ್ದು, 3,825 ಮಂದಿ ಗಾಯಗೊಂಡಿದ್ದಾರೆ ಎಂದು ರಷ್ಯಾದ ಸೇನಾ ಮುಖ್ಯಸ್ಥ ಕರ್ನಲ್ ಸೆರ್ಗೆಯ್ ರುಡಿಸ್ಕೋಯ್ ಹೇಳಿದ್ದಾರೆ. ಇದುವರೆಗೆ 16,000 ರಷ್ಯಾದ ಸೈನಿಕರನ್ನು ಕೊಂದಿದ್ದೇವೆ ಎಂದು ಉಕ್ರೇನಿಯನ್ ಮಿಲಿಟರಿ ಹೇಳಿದೆ.

ಪೋಲೆಂಡ್​ಗೆ ಬೈಡನ್​ ಭೇಟಿ: ಅಮೆರಿಕ ಅಧ್ಯಕ್ಷ ಜೋ ಬೈಡನ್​​ ಶುಕ್ರವಾರ ಯುದ್ಧಪೀಡಿತ ನೆರೆಯ ರಾಷ್ಟ್ರ ಪೋಲೆಂಡ್‌ಗೆ ಭೇಟಿ ನೀಡಿದ್ದಾರೆ. ಅವರು ಉಕ್ರೇನ್ ದೇಶದ ಗಡಿಯಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿರುವ ಜೋಶೋವ್ ನಗರಕ್ಕೆ ಪ್ರಯಾಣಿಸಿದರು. ಇತ್ತೀಚಿನ ಯುದ್ಧ ಬಿಕ್ಕಟ್ಟಿನ ಹಿನ್ನೆಲೆ ಪೋಲೆಂಡ್‌ನಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಲ್ಲಿ ನಿಯೋಜಿಸಲಾದ ಅಮೆರಿಕ ಮತ್ತು ನ್ಯಾಟೋ ಪಡೆಗಳೊಂದಿಗೆ ಅವರು ಮಾತನಾಡಿದರು.

ಪೋಲೆಂಡ್‌ಗೆ ವಂದನೆ ಸಲ್ಲಿಸಿದ ಬೈಡನ್​:ಯುಎಸ್​ ಮತ್ತು ನ್ಯಾಟೋ ಪಡೆಗಳ ಭೇಟಿ ನಂತರ ಬೈಡನ್​ ಹಲವಾರು ಮಾನವೀಯ ನೆರವಿಗೆ ನಿಂತಿರುವ ತಜ್ಞರನ್ನು ಭೇಟಿಯಾದರು. ನಿರಾಶ್ರಿತರ ಸಂಕಷ್ಟ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅವರೊಂದಿಗೆ ಚರ್ಚಿಸಿದರು. ರಷ್ಯಾದ ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್‌ನಿಂದ 22 ದಶಲಕ್ಷಕ್ಕೂ ಹೆಚ್ಚು ನಿರಾಶ್ರಿತರು ಪೋಲೆಂಡ್‌ಗೆ ಪ್ರವೇಶಿಸಿದ್ದಾರೆ.

ಅವರಿಗೆ ಆಶ್ರಯ ನೀಡಿದ್ದಕ್ಕಾಗಿ ಪೋಲೆಂಡ್‌ಗೆ ವಂದನೆ ಸಲ್ಲಿಸುತ್ತೇನೆ ಎಂದು ಬೈಡೆನ್ ಹೇಳಿದರು. ಅವರು ಉಕ್ರೇನ್ ಗಡಿಯ ಹತ್ತಿರ ಹೋಗಲು ಬಯಸಿದ್ದರು. ಆದರೆ, ಭದ್ರತಾ ಕಾರಣಗಳಿಗಾಗಿ ಅಧಿಕಾರಿಗಳು ಅವರನ್ನು ತಡೆದರು.

1200 ಕ್ಷಿಪಣಿಗಳಿಂದ ದಾಳಿ:ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾ 1,200 ಕ್ಷಿಪಣಿಗಳನ್ನು ಉಡಾಯಿಸಿದೆ ಮತ್ತು ಅರ್ಧಕ್ಕಿಂತ ಹೆಚ್ಚು ಅವು ಗುರಿ ಸಾಧಿಸಿವೆ ಎಂದು ಉಕ್ರೇನ್ ಹೇಳಿದೆ. ಉಕ್ರೇನ್ ಸಂಸತ್ತಿನ ಸದಸ್ಯರೊಬ್ಬರು ಚೆರ್ನಿಹಿವ್ ನಗರದಲ್ಲಿ ಪುಟಿನ್ ಪಡೆಗಳಿಂದ ಉಂಟಾದ ವಿನಾಶದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಓದಿ:ಏ.1 ರಂದು ರಾಜ್ಯಕ್ಕೆ ಅಮಿತ್ ಶಾ ಭೇಟಿ, ಏ. 5ರಂದು ಕರ್ನಾಟಕಕ್ಕೆ ಪ್ರಧಾನಿ ಬರುವ ನಿರೀಕ್ಷೆ : ಬಸವರಾಜ ಬೊಮ್ಮಾಯಿ

ಚೆರ್ನಿಹಿವ್​ ವಿನಾಶ:ಚೆರ್ನಿಹಿವ್‌ನ ಮೇಯರ್‌ನೊಂದಿಗೆ ಅವರು ಕಾರಿನಲ್ಲಿ ನಗರದಾದ್ಯಂತ ವಿನಾಶ ಮತ್ತು ವಿಧ್ವಂಸಕತೆಯನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಡೊನೆಟ್ಸ್ಕ್‌ನಿಂದ ಕ್ರಿಮಿಯಾಕ್ಕೆ ರಷ್ಯಾ ಭಾಗಶಃ ರಸ್ತೆ ನಿರ್ಮಿಸಿದೆ ಎಂದು ಉಕ್ರೇನ್ ರಕ್ಷಣಾ ಸಚಿವರು ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ. ಯುಎನ್ ಮಾನವ ಹಕ್ಕುಗಳ ಗುಂಪು ಮರಿಯುಪೋಲ್‌ನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಅಲ್ಲಿ ಸಾಮೂಹಿಕ ಸಮಾಧಿಗಳು ನಡೆಯುತ್ತಿವೆ. ರಾಸಾಯನಿಕ ಅಥವಾ ಪರಮಾಣು ಶಸ್ತ್ರಾಸ್ತ್ರಗಳ ರಷ್ಯಾ ಬಳಕೆ ಉಕ್ರೇನ್‌ನಲ್ಲಿನ ಯುದ್ಧದ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಬಹುದು ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲೆನ್‌ಬರ್ಗ್ ಕಳವಳ ವ್ಯಕ್ತಪಡಿಸಿದ್ದಾರೆ.

ಚೀನಾ-ಬ್ರಿಟನ್​ ಮಾತುಕತೆ:ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್​ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಇಬ್ಬರು ನಾಯಕರು ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷದಿಂದ ಉಂಟಾಗುವ ಪರಿಸ್ಥಿತಿ ಸೇರಿದಂತೆ ಉಭಯ ನಾಯಕರು ಪರಸ್ಪರ ಹಿತಾಸಕ್ತಿಯ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡಲು ಕ್ಸಿ ಮೇಲೆ ಒತ್ತಡ ಹೇರಲು ಬೋರಿಸ್ ಜಾನ್ಸನ್ ಈ ಸಂಭಾಷಣೆಯನ್ನು ಬಳಸಿರಬಹುದು ಎಂದು ನಿರೀಕ್ಷಿಸಲಾಗಿದೆ.

ವಿಶೇಷ ಪಾರ್ಥನೆ ಸಭೆ:ಯುದ್ಧದ ನಡುವೆ ಪೋಪ್ ಫ್ರಾನ್ಸಿಸ್ ಉಕ್ರೇನ್‌ಗಾಗಿ ಶುಕ್ರವಾರ ವಿಶೇಷ ಪ್ರಾರ್ಥನಾ ಸಭೆ ನಡೆಸಿದರು. ಈ ಸಭೆಯಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದ ಪಾದ್ರಿಗಳು ಮತ್ತು ಸಾಮಾನ್ಯ ಜನರನ್ನು ಆಹ್ವಾನಿಸಿದ್ದರು.



ABOUT THE AUTHOR

...view details