ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಉಕ್ರೇನ್ನಲ್ಲಿ ರಷ್ಯಾ ಪಡೆಗಳು ಹಲವೆಡೆ ದಾಳಿ ನಡೆಸಿದೆ. ಹಲವರು ಸಾವನ್ನಪ್ಪಿ, ಇನ್ನೂ ಹಲವರು ಗಾಯಗೊಂಡಿದ್ದಾರೆ. ಉಕ್ರೇನ್ ಪಡೆಗಳೂ ಪ್ರತಿದಾಳಿ ನಡೆಸುತ್ತಿದ್ದು, ಪರಿಸ್ಥಿತಿ ತೀರಾ ಗಂಭೀರವಾಗಿದೆ.
ಭಾರತೀಯ ಸೇನೆಯಲ್ಲಿ ಮೇಜರ್ ಜನರಲ್ ಆಗಿ ಕೆಲಸ ಮಾಡಿದ್ದ ಹಾಗೂ ರಕ್ಷಣಾ ತಜ್ಞರಾದ ಪಿ.ಕೆ.ಸೆಹಗಲ್ ಅವರು ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆ ಮತ್ತು ಇತರ ರಾಷ್ಟ್ರಗಳ ನಿಲುವಿನ ಕುರಿತಂತೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಪರಿಸ್ಥಿತಿ ಎಷ್ಟೇ ಗಂಭೀರವಾಗಿದ್ದರೂ ಶಾಂತಿಯುತ ಪರಿಹಾರಕ್ಕಾಗಿ ಉಕ್ರೇನ್ ಮನವಿ ಮಾಡುತ್ತಿದೆ. ರಷ್ಯಾ ಸಣ್ಣ ದೇಶವಾದ ಉಕ್ರೇನ್ ಮೇಲೆ ದಾಳಿ ಮಾಡಬಹುದೆಂದು ಯಾರೂ ಭಾವಿಸಿರಲಿಲ್ಲ. ಉಕ್ರೇನ್‌ನ ಸೇನಾ ಶಕ್ತಿ ರಷ್ಯಾಕ್ಕಿಂತ ಕಡಿಮೆ ಇದೆ. ಇದರ ಹೊರತಾಗಿಯೂ ರಷ್ಯಾ ಕ್ಷಿಪಣಿ ದಾಳಿ ಮತ್ತು ವೈಮಾನಿಕ ದಾಳಿ ನಡೆಸಿದೆ ಎಂದು ಪಿಕೆ ಸೆಹಗಲ್ ಹೇಳಿದ್ದಾರೆ.
ನಿವೃತ್ತ ಮೇಜರ್ ಜನರಲ್ ಪಿ.ಕೆ.ಸೆಹಗಲ್ 'ಎಷ್ಟೇ ಪ್ರತಿಕೂಲ ಪರಿಸ್ಥಿತಿ ಇದ್ದರೂ': ಉಕ್ರೇನ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ, ಪಿಕೆ ಸೆಹಗಲ್ ಅವರು, ಉಕ್ರೇನ್ ಮತ್ತು ರಷ್ಯಾದಲ್ಲಿನ ಬಿಕ್ಕಟ್ಟಿನ ಶಾಂತಿಯುತ ಪರಿಹಾರಕ್ಕೆ ಭಾರತ ಮನವಿ ಮಾಡಿದೆ. ಶಾಂತಿಯುತ ಪರಿಹಾರ ಕಂಡುಕೊಳ್ಳುವಂತೆ ಭಾರತ ಪಾಶ್ಚಾತ್ಯ ದೇಶಗಳಿಗೆ ಮನವಿ ಮಾಡಿದೆ ಎಂದು ಪಿಕೆ ಸೆಹಗಲ್ ಹೇಳಿದ್ದಾರೆ.
ಇದನ್ನೂ ಓದಿ:ಇತಿಹಾಸದಲ್ಲಿ ಕಂಡರಿಯದ ಪರಿಣಾಮ ಎದುರಿಸಬೇಕಾಗುತ್ತದೆ: ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪುಟಿನ್ ಎಚ್ಚರಿಕೆ
ಬೇರೆ ದೇಶಗಳ ಆಕ್ರಮಣಶೀಲತೆ ಬಗ್ಗೆ ಭಾರತದ ಧೋರಣೆಗೆ ಪ್ರತಿಕ್ರಿಯೆ ನೀಡಿರುವ ಪಿಕೆ ಸೆಹಗಲ್, ಯಾವುದೇ ಸಂದರ್ಭದಲ್ಲೂ ಯಥಾಸ್ಥಿತಿಯಲ್ಲಿ ಏಕಪಕ್ಷೀಯ ಬದಲಾವಣೆಯನ್ನು ಭಾರತ ಒಪ್ಪಿಕೊಳ್ಳುವುದಿಲ್ಲ. ಎಷ್ಟೇ ಪ್ರತಿಕೂಲ ಪರಿಸ್ಥಿತಿ ಇದ್ದರೂ, ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳುವ ಭರವಸೆಯನ್ನು ಭಾರತ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರು ತಿಂಗಳಿಂದ ರಷ್ಯಾ ಯುದ್ಧ ತಯಾರಿ:ಯಾವುದೇ ದೇಶವು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೆ, ರಷ್ಯಾ ತಕ್ಷಣವೇ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ರಷ್ಯಾ ಅಧ್ಯಕ್ಷರು ಹೇಳಿದ್ದಾರೆ. ಇದೀಗ ಬೇರೆ ಯಾವುದೇ ದೇಶವು ರಷ್ಯಾವನ್ನು ಪ್ರಚೋದಿಸುತ್ತಿಲ್ಲ ಎಂದು ರಷ್ಯಾಕ್ಕೆ ತಿಳಿದಿದೆ. ದಾಳಿ ನಡೆಸಲು ಸಾಕಷ್ಟು ತಯಾರಿ ನಡೆಸಬೇಕು ಎಂಬುದು ರಷ್ಯಾಕ್ಕೆ ತಿಳಿದಿದೆ. ರಷ್ಯಾ ಸುಮಾರು ಆರು ತಿಂಗಳನಿಂದ ತಯಾರಿ ನಡೆಸುತ್ತಿತ್ತು. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಭಾಗಿಯಾಗದಂತೆ ಜರ್ಮನಿ, ಯುಕೆ ಮುಂತಾದ ದೇಶಗಳಿಗೆ ರಷ್ಯಾ ಎಚ್ಚರಿಕೆ ನೀಡಿದೆ ಎಂದು ಸೆಹಗಲ್ ಹೇಳಿದ್ದಾರೆ.
ಉಕ್ರೇನ್ ವಿಚಾರವಾಗಿ ಅಮೆರಿಕದ ನಿಲುವಿನ ಕುರಿತು ಮಾತನಾಡಿದ ಸೆಹಗಲ್, ಉಕ್ರೇನ್ಗೆ ಅಮೆರಿಕ ಒಂದು ರೀತಿಯಲ್ಲಿ ಭರವಸೆಯನ್ನು ನೀಡುತ್ತಿತ್ತು. ಆದರೆ, ಅಮೆರಿಕ ಈಗ ಬೇರೆ ಮಾರ್ಗಗಳನ್ನು ಅನುಸರಿಸುತ್ತಿದೆ. ಉಕ್ರೇನ್ ಮೇಲಿನ ದಾಳಿಯ ನಂತರ ರಷ್ಯಾದ ಮುಖ ಬಯಲಾಗಿದೆ. ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ನಂತರ ಉಕ್ರೇನ್ ನಿಜವಾಗಿಯೂ ನಾಶವಾಗುತ್ತಿದೆ. ಇಡೀ ಜಗತ್ತು ಉಕ್ರೇನ್ ಪರವಾಗಿ ಪ್ರಾರ್ಥಿಸುತ್ತಿದೆ ಎಂದು ಸೆಹಗಲ್ ಅಭಿಪ್ರಾಯಪಟ್ಟಿದ್ದಾರೆ.