ಡೆಹ್ರಾಡೂನ್(ಉತ್ತರಾಖಂಡ) :ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತ ತಟಸ್ಥ ನೀತಿ ಅನುಸರಿಸಿ ತನ್ನ ಬೆಂಬಲಕ್ಕೆ ನಿಂತಿಲ್ಲ ಎಂಬ ಕಾರಣಕ್ಕಾಗಿ, ಉಕ್ರೇನ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸಲು ಅಲ್ಲಿನ ಶಿಕ್ಷಣ ಸಂಸ್ಥೆಗಳು ನಿರಾಕರಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.
ರಷ್ಯಾ-ಉಕ್ರೇನ್ ಮಧ್ಯೆ ಒಂದೂವರೆ ತಿಂಗಳಿನಿಂದ ಯುದ್ಧ ನಡೆಯುತ್ತಿದೆ. ಯುದ್ಧ ಆರಂಭವಾದ ಬಳಿಕ ಉಕ್ರೇನ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳು, ನಾಗರಿಕರನ್ನು ಸ್ವದೇಶಕ್ಕೆ ಮರಳಿ ಕರೆತರಲಾಗಿದೆ. ಯುದ್ಧದಿಂದಾಗಿ ಶಿಕ್ಷಣ ಅರ್ಧಕ್ಕೆ ನಿಂತಿದೆ. ಆನ್ಲೈನ್ ಶಿಕ್ಷಣ ನೀಡಲು ಕೂಡ ಉಕ್ರೇನ್ ನಿರಾಕರಿಸಿದೆ.
ಭಾರತ ಯುದ್ಧದಲ್ಲಿ ತನಗೆ ಬೆಂಬಲ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ಉಕ್ರೇನ್ ಬಿಟ್ಟು ಬಂದ ಭಾರತೀಯರಿಗೆ ಶಿಕ್ಷಣ ಮುಂದುವರಿಸಲು ಆ ದೇಶ ಒಪ್ಪುತ್ತಿಲ್ಲ. ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿರುವ ಉತ್ತರಾಖಂಡ ವೈದ್ಯಕೀಯ ವಿದ್ಯಾರ್ಥಿಗಳು, ಉಕ್ರೇನ್ ದೇಶ ತಮ್ಮ ಶಿಕ್ಷಣವನ್ನು ಮುಂದುವರಿಸಲು ಅವಕಾಶ ನೀಡುತ್ತಿಲ್ಲ.