ಹೈದರಾಬಾದ್: ಯುದ್ಧಪೀಡಿತ ಉಕ್ರೇನ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರು ಸಹಾಯಕ್ಕೆ ಅಂಗಲಾಚುತ್ತಿರುವ ದೃಶ್ಯ ಒಂದುಕಡೆಯಾದರೆ, ದಾಳಿ ಇಡುತ್ತಿರುವ ರಷ್ಯಾ ಸೈನಿಕರನ್ನು ಉಕ್ರೇನ್ ಯೋಧರು ಸದೆಬಡಿಯುತ್ತಿದ್ದಾರೆ. ಅದರೂ ರಷ್ಯಾ ತನ್ನ ಬಲಾಬಲ ತೋರಿಸುತ್ತಲೇ ಉಕ್ರೇನ್ನ ಪಟ್ಟಣಗಳನ್ನು ಆಕ್ರಮಿಸುತ್ತಾ ಮುನ್ನುಗ್ಗುತ್ತಿದೆ. ಇದರ ಬೆನ್ನಲ್ಲೇ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು, ಟ್ವಿಟರ್ನಲ್ಲಿ ಇರುವಂತೆ, ಕದ್ದ ರಷ್ಯಾದ ಯುದ್ಧಟ್ಯಾಂಕರ್ನ್ನು ಆನ್ಲೈನ್ನಲ್ಲಿ ಮಾರಾಟಕ್ಕೆ ಇಡಲಾಗಿದೆ. ಇದಕ್ಕೆ ಬೆಲೆ ಕೂಡ ನಿಗದಿ ಮಾಡಲಾಗಿದ್ದು, ಬಳಕೆಯಾದ ಹಾಗೂ ಸಂಪೂರ್ಣವಾಗಿ ಸಕ್ರಿಯವಾಗಿರುವ ಟಿ-72 ಯುದ್ಧ ಟ್ಯಾಂಕರ್ ಮಾರಾಟಕ್ಕೆ ಇದೆ ಎಂದು ಬರೆದಿರುವ ರೈತ ಅದಕ್ಕೆ $400,000.00 ಬೆಲೆಯನ್ನು ನಿಗದಿ ಮಾಡಿದ್ದಾನೆ. ಆದರೆ, ಇದು ಸತ್ಯವೋ ಅಥವಾ ನಖಲಿಯೋ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.