ಕರ್ನಾಟಕ

karnataka

By

Published : Feb 14, 2021, 11:29 AM IST

ETV Bharat / bharat

ಉತ್ತರಾಖಂಡ ಹಿಮನದಿ ದುರಂತ: ತಪೋವನದ ಮುಖ್ಯ ಸುರಂಗದಲ್ಲಿ ಇಂದು 2 ಶವ ಪತ್ತೆ

ಫೆಬ್ರವರಿ 7 ರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ತಪೋವನದ ಮುಖ್ಯ ಸುರಂಗದಲ್ಲಿ ಇಂದು 2 ಶವಗಳು ಪತ್ತೆಯಾಗಿವೆ ಎಂದು ಡಿಜಿಪಿ ಅಶೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಉತ್ತರಾಖಂಡ ಹಿಮನದಿ ದುರಂತ
ಉತ್ತರಾಖಂಡ ಹಿಮನದಿ ದುರಂತ

ಚಮೋಲಿ (ಉತ್ತರಾಖಂಡ): ಫೆಬ್ರವರಿ 7 ರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ತಪೋವನ ಸುರಂಗದಲ್ಲಿ ಇಂದು ಎರಡು ಶವ ಪತ್ತೆಯಾಗಿವೆ ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ತಿಳಿಸಿದ್ದಾರೆ.

ಉತ್ತರಾಖಂಡ್ ಹಿಮನದಿ ಸ್ಫೋಟದ ಘಟನೆಯಲ್ಲಿ ಈವರೆಗೆ ಒಟ್ಟು 40 ಶವ ಪತ್ತೆಯಾಗಿವೆ. ಉತ್ತರಾಖಂಡ ಪೊಲೀಸರು, ಎಸ್‌ಡಿಆರ್‌ಎಫ್ ಮತ್ತು ಎನ್​ಡಿಆರ್​ಎಫ್​ ಪಡೆಗಳು ಶವಗಳನ್ನು ಹೊರತೆಗೆಯುತ್ತಿದ್ದಾರೆ ಎಂದು ಡಿಜಿಪಿ ಹೇಳಿದರು.

ಇದನ್ನೂ ಓದಿ:ನದಿ ಜೋಡಣೆ: ರಾಜ್ಯಗಳಿಗೆ ಬೇಕಿದೆ ರಾಷ್ಟ್ರೀಯ ದೃಷ್ಟಿಕೋನ

ಫೆಬ್ರವರಿ 7 ರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ತಪೋವನದ ಮುಖ್ಯ ಸುರಂಗದಲ್ಲಿ ಇಂದು 2 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಉತ್ತರಾಖಂಡ ಪೊಲೀಸರು, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್​ಎಫ್ ಜವಾನರು ಶವಗಳನ್ನು ಹೊರತೆಗೆಯುತ್ತಿದ್ದಾರೆ ಎಂದು ಡಿಜಿಪಿ ಅಶೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ-ರೆನಿ ಪ್ರದೇಶದಲ್ಲಿ ಭಾನುವಾರ ಹಿಮನದಿ ಸ್ಫೋಟಗೊಂಡಿದ್ದು, ಇದು ಧೌಲಿಗಂಗಾ ಮತ್ತು ಅಲಕಾನಂದ ನದಿಗಳಲ್ಲಿ ಭಾರಿ ಪ್ರವಾಹಕ್ಕೆ ಕಾರಣವಾಯಿತು.

ABOUT THE AUTHOR

...view details