ಕರ್ನಾಟಕ

karnataka

By

Published : Apr 21, 2022, 3:45 PM IST

ETV Bharat / bharat

ಅಹಮದಾಬಾದ್‌ಗೆ ಬಂದಿಳಿದ ಬ್ರಿಟನ್ ಪ್ರಧಾನಿ; ಗಾಂಧಿ ಆಶ್ರಮದಲ್ಲಿ ಚರಕ ತಿರುಗಿಸಿ ನೂಲು ತೆಗೆಯಲು ಪ್ರಯತ್ನ

ಇಂದಿನಿಂದ ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌​ ಗುಜರಾತ್​ ಅಹಮದಾಬಾದ್‌ಗೆ ಬಂದಿಳಿದಿದ್ದು, ಭವ್ಯ ಸ್ವಾಗತ ನೀಡಲಾಯಿತು.

UK PM Boris Johnson in India
UK PM Boris Johnson in India

ಅಹಮದಾಬಾದ್​(ಗುಜರಾತ್​): ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈಗಾಗಲೇ ಗುಜರಾತ್​ನ ಅಹಮದಾಬಾದ್​​ಗೆ ಬಂದಿಳಿದಿದ್ದು, ಅದ್ಧೂರಿ ಸ್ವಾಗತ ನೀಡಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​, ರಾಜ್ಯಪಾಲ ಆಚಾರ್ಯ ದೇವವ್ರತ್​ ಸೇರಿದಂತೆ ಅನೇಕರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಅಹಮದಾಬಾದ್​ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿರುವ ಬ್ರಿಟಿಷ್‌ ಪ್ರಧಾನಿ,​​ ಚರಕ ತಿರುಗಿಸಿ ನೂಲು ತೆಗೆಯುವ ಪ್ರಯತ್ನ ಮಾಡಿ ಗಮನ ಸೆಳೆದರು. ಈ ವೇಳೆ ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮ ಗಾಂಧಿ ಅವರನ್ನು ಸ್ಮರಿಸಿ ತಮ್ಮ ಅಭಿಪ್ರಾಯ ಬರೆದಿದ್ದಾರೆ. 'ಅಸಾಧಾರಣ ವ್ಯಕ್ತಿಯ ಆಶ್ರಮಕ್ಕೆ ಬಂದಿರುವುದು ಬಹಳ ಖುಷಿಯ ವಿಚಾರ' ಎಂದಿದ್ದಾರೆ.

ಇದಾದ ಬಳಿಕ ವಡೋದರಾದ ಬೃಹತ್ ಜೆಸಿಬಿ ಯಂತ್ರ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ್ದು, ಹೊಸ ಫ್ಲ್ಯಾಟ್​ಗೆ ಚಾಲನೆ ನೀಡಿದರು. ಇದರ ಬೆನ್ನಲ್ಲೇ ಕೈಗಾರಿಕೋದ್ಯಮಿ ಗೌತಮ್ ಅದಾನಿ ಜೊತೆ ಮಹತ್ವದ ಮಾತುಕತೆ ನಡೆಸಿದರು.

ಇದನ್ನೂ ಓದಿ:ಸಿಎಂ ಬರ್ತಾರೆ ಎಂದು ಪ್ರಯಾಣಿಕರ ಕಾರನ್ನೇ ಒಯ್ದರು.. ಮಕ್ಕಳ ಸಮೇತ ಬಸ್​ ಸ್ಟಾಪ್​ಲ್ಲೇ ರಾತ್ರಿ ಕಳೆದ ಕುಟುಂಬ!

ಗುಜರಾತ್​​ಗೆ ಭೇಟಿ ನೀಡಿರುವ ಬ್ರಿಟನ್​ನ ಮೊದಲ ಪ್ರಧಾನಿಯಾಗಿ ಬೋರಿಸ್ ಜಾನ್ಸನ್‌ ಹೊರಹೊಮ್ಮಿದ್ದು, ನಾಳೆ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದಗಳೇರ್ಪಡುವ ಸಾಧ್ಯತೆ ಇದೆ. ಜೊತೆಗೆ ರಷ್ಯಾ-ಉಕ್ರೇನ್ ನಡುವಿನ ಯುದ್ಧದ ವಿಚಾರವಾಗಿಯೂ ಭಾರತ ತಟಸ್ಥ ನೀತಿ ಅನುಸರಿಸುತ್ತಿರುವ ಬಗ್ಗೆಯೂ ಚರ್ಚೆ ನಡೆಯಬಹುದು.

ABOUT THE AUTHOR

...view details