ಕರ್ನಾಟಕ

karnataka

ETV Bharat / bharat

ಮಾಸ್ಕೋದಲ್ಲಿ ಇನ್ಫೋಸಿಸ್​ ಉಪಸ್ಥಿತಿ ಬಗ್ಗೆ ಪ್ರಶ್ನೆಗಳ ಸುರಿಮಳೆ ಎದುರಿಸಿದ ಬ್ರಿಟನ್​ ವಿತ್ತ ಸಚಿವ! - ಬ್ರಿಟನ್​ ಹಣಕಾಸು ಸಚಿವ ರಿಷಿ ಸುನಕ್​

ಮಾಧ್ಯಮದ ಪ್ರಶ್ನೆಯೊಂದಕ್ಕೆ ಒಬ್ಬ ಚುನಾಯಿತ ರಾಜಕಾರಣಿಯಾಗಿ ಉತ್ತರಿಸಿರುವ ರಿಷಿ ಸುನಕ್​, ನಾನು ಹೊಣೆಗಾರನಾಗಿರುವ ವಿಷಯಗಳಿಗೆ ಉತ್ತರಿಸಲು ಸಂದರ್ಶನಕ್ಕೆ ಬಂದಿದ್ದೇನೆ. ನನ್ನ ಹೆಂಡತಿ ಹೊಣೆಗಾರಳಾಗಿರುವ ವಿಷಯಗಳಿಗೆ ಉತ್ತರಿಸಲು ಅಲ್ಲ. ನನಗೂ ಆ ಕಂಪನಿ​ಗೂ ಯಾವುದೇ ಸಂಬಂಧವಿಲ್ಲದ ಕಾರಣ ಆ ಬಗ್ಗೆ ನಾನು ಉತ್ತರಿಸುವುದು ಸರಿಯಲ್ಲ ಎಂದಿದ್ದಾರೆ.

UK finance minister Rishi Sunak
ಬ್ರಿಟನ್​ ಹಣಕಾಸು ಸಚಿವ ರಿಷಿ ಸುನಕ್​

By

Published : Mar 25, 2022, 11:04 AM IST

ಲಂಡನ್( ಇಂಗ್ಲೆಂಡ್​): ಪತ್ನಿ ಅಕ್ಷತಾ ಮೂರ್ತಿ ಪಾಲು ಹೊಂದಿರುವ ಭಾರತದ ಸಾಫ್ಟ್​ವೇರ್​ ಕಂಪನಿ ಇನ್ಫೋಸಿಸ್​ನ ರಷ್ಯಾದ ಉಪಸ್ಥಿತಿಯ ಬಗ್ಗೆ ಬ್ರಿಟನ್​ ಹಣಕಾಸು ಸಚಿವ ರಿಷಿ ಸುನಕ್​ ಗುರುವಾರ ಪ್ರಶ್ನೆಗಳನ್ನು ಎದುರಿಸಿದ್ದಾರೆ. ಉಕ್ರೇನ್​ ಮೇಲೆ ಆಕ್ರಮಣ ಮಾಡಿರುವ ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರನ್ನು ಸ್ಕೈ ನ್ಯೂಸ್ ವರದಿಗಾರರೊಬ್ಬರು, ನಿಮ್ಮ ಮನೆಯವರದೇ ವ್ಯವಹಾರಗಳಿಗೆ ನಿಮ್ಮ ಸಲಹೆಗಳನ್ನು ಅನುಸರಿಸಲಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ರಿಷಿ ಸುನಕ್​ ಪ್ರತ್ಯೇಕ ಕಂಪನಿಗಳ ವ್ಯವಹಾರಗಳು ಅವರಿಗೆ ಸಂಬಂಧಿಸಿರುತ್ತದೆ ಹೊರತು ಅದು ನನಗೆ ಅನ್ವಯಿಸುವುದಿಲ್ಲ ಎಂದು ಪ್ರತ್ಯುತ್ತರ ಕೊಟ್ಟಿದ್ದಾರೆ. ನಿಮ್ಮ ಕುಟುಂಬ ರಷ್ಯಾದೊಂದಿಗೆ ಸಂಪರ್ಕ ಹೊಂದಿದೆ. ಭಾರತದ ಇನ್ಫೋಸಿಸ್​ ಸಂಸ್ಥೆಯ ರಷ್ಯಾ ಕಚೇರಿಯಲ್ಲಿ ನಿಮ್ಮ ಪತ್ನಿ ಅಕ್ಷತಾ ಅವರು ಪಾಲು ಹೊಂದಿದ್ದಾರೆ. ಅಲ್ಲಿ ಅವರ ವಿತರಣಾ ಕಚೇರಿಯೂ ಕಾರ್ಯ ನಿರ್ವಹಿಸುತ್ತಿದೆ. ಮಾಸ್ಕೋದಾ ಆಲ್ಫಾ ಬ್ಯಾಂಕ್​ನೊಂದಿಗೆ ಕಚೇರಿ ಸಂಪರ್ಕ ಹೊಂದಿದೆ. ಇತರರಿಗೆ ಸಲಹೆಗಳನ್ನು ನೀಡುವ ನೀವು ನಿಮ್ಮದೇ ಕುಟುಂಬದ ಕಂಪನಿಗೆ ಸಲಹೆಗಳನ್ನು ನೀಡುವುದಿಲ್ಲವೇ ಎಂದು ಟಿವಿ ಸಂದರ್ಶನದ ವೇಳೆ ಪ್ರಶ್ನಿಸಲಾಗಿತ್ತು.

ನಾನು ಹೊಣೆಗಾರನಾಗಿರುವ ವಿಷಯಕ್ಕೆ ಮಾತ್ರವೇ ಉತ್ತರ ಕೊಡ್ತೇನಿ:ಇದಕ್ಕೆ ಒಬ್ಬ ಚುನಾಯಿತ ರಾಜಕಾರಣಿಯಾಗಿ ಉತ್ತರಿಸಿರುವ ರಿಷಿ ಸುನಕ್​, ನಾನು ಹೊಣೆಗಾರನಾಗಿರುವ ವಿಷಯಗಳಿಗೆ ಉತ್ತರಿಸಲು ಸಂದರ್ಶನಕ್ಕೆ ಬಂದಿದ್ದೇನೆ. ನನ್ನ ಹೆಂಡತಿ ಹೊಣೆಗಾರಳಾಗಿರುವ ವಿಷಯಗಳಿಗೆ ಉತ್ತರಿಸಲು ಅಲ್ಲ ಎಂದು ಅಷ್ಟೇ ಖಾರವಾಗಿ ಉತ್ತರ ಕೊಟ್ಟಿದ್ದಾರೆ ಇನ್ಫಿ ನಾರಾಯಣ ಮೂರ್ತಿ ಅವರ ಅಳಿಯ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಡಳಿತ ಸರ್ಕಾರದಿಂದ ನಿಮ್ಮ ಕುಟುಂಬ ಸಮರ್ಥವಾಗಿ ಪ್ರಯೋಜನ ಪಡೆಯುತ್ತಿದೆಯಾ ಎಂಬ ಪ್ರಶ್ನೆಗೆ, ಅದು ನನಗೆ ಸಂಬಂಧಿಸಿದ್ದಲ್ಲ ಎಂದು ನಾನು ಭಾವಿಸುತ್ತೇನೆ. ಎಲ್ಲ ಕಂಪನಿಗಳ ಕಾರ್ಯಾಚರಣೆಗಳು ಅವರಿಗೆ ಬಿಟ್ಟದ್ದು. ನಾವು ಮಹತ್ವದ ನಿರ್ಬಂಧಗಳನ್ನು ಹಾಕಿದ್ದೇವೆ. ನಾವು ಜವಾಬ್ದಾರರಾಗಿರುವ ಎಲ್ಲಾ ಕಂಪನಿಗಳು ಪುಟಿನ್ ಅವರ ಆಕ್ರಮಣಶೀಲತೆಗೆ ಬಲವಾದ ಸಂದೇಶವನ್ನೇ ನೀಡುತ್ತವೆ ಎಂದರು.

ನನಗೂ ಕಂಪನಿಗೂ ಸಂಬಂಧವಿಲ್ಲ: ಇನ್ಫೋಸಿಸ್​ನ ಯುಕೆ ಕಚೇರಿಯೂ ಇದೇ ರೀತಿಯ ಬಲವಾದ ಸಂದೇಶವನ್ನು ಕಳುಹಿಸುತ್ತಿದೆಯೇ ಎಂಬುದನ್ನೂ ಕೇಳಲಾಯಿತು. ನನಗೆ ಆ ಕಂಪನಿಯೊಂದಿಗೆ ಯಾವುದೇ ಸಂಬಂಧವಿಲ್ಲದ ಕಾರಣ ನನಗೆ ಆ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದು ಸುನಕ್ ಉತ್ತರಿಸಿದರು. ಉಕ್ರೇನ್​ ಮೇಲೆ ದಾಳಿ ನಡೆಸಿರುವ ರಷ್ಯಾದ ವ್ಯವಹಾರ ಹಾಗೂ ವ್ಯಕ್ತಿಗಳ ಮೇಲೆ ವ್ಯಾಪಕವಾದ ನಿರ್ಬಂಧಗಳನ್ನು ಈಗಾಗಲೇ ವಿಧಿಸಲಾಗಿದೆ.

ರಷ್ಯಾದಲ್ಲಿ ಯಾವುದೇ ಹೂಡಿಕೆ ಮಾಡುವುದಾದರೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ಯುಕೆಯ ಎಲ್ಲ ಕಂಪನಿಗಳಿಗೆ ತಿಳಿಸಿದ್ದೇನೆ. ನನಗೆ ತಿಳಿದಿರುವಂತೆ ಸದ್ಯಕ್ಕೆ ರಷ್ಯಾದಲ್ಲಿ ಯಾವುದೇ ಹೊಸ ಹೂಡಿಕೆಗಳನ್ನು ಮಾಡಿಲ್ಲ. ರಷ್ಯಾ ಇನ್ನಷ್ಟು ಆರ್ಥಿಕ ಮುಗ್ಗಟ್ಟು ಎದುರಿಸುವಂತೆ ಮಾಡಿ ಮುಂದಕ್ಕೆ ಸಂಭವಿಸಬಹುದಾದಂತಹ ರಕ್ತಪಾತವನ್ನು ನಿಲ್ಲಿಸುವಲ್ಲಿ ಯೋಚಿಸಬೇಕಿದೆ ಎಂದು ಸುನಕ್​ ಹೇಳಿದರು.

ಇದನ್ನೂ ಓದಿ:ರಷ್ಯಾ ಉಕ್ರೇನ್​ ನಾಗರಿಕರನ್ನು ಅಪಹರಣ ಮಾಡುತ್ತಿದೆ: ಗಂಭೀರ ಆರೋಪ ಮಾಡಿದ ಕೀವ್​

ಉಕ್ರೇನ್​ ಮತ್ತು ರಷ್ಯಾ ನಡುವೆ ಶಾಂತಿಯನ್ನೇ ಇನ್ಫೋಸಿಸ್​ ಬೆಂಬಲಿಸುತ್ತದೆ. ರಷ್ಯಾದಲ್ಲಿ ಇನ್ಫೋಸಿಸ್​ ಕೆಲಸಗಾರರ ಒಂದು ಸಣ್ಣ ತಂಡವಿದೆ. ಅದು ನಮ್ಮ ಕೆಲವು ಜಾಗತಿಕ ಗ್ರಾಹಕರಿಗೆ ಸ್ಥಳೀಯವಾಗಿ ಸೇವೆ ಸಲ್ಲಿಸುತ್ತದೆ. ಅದರ ಹೊರತಾಗಿ ನಾವು ರಷ್ಯಾದ ಸ್ಥಳೀಯ ಉದ್ಯಮಗಳೊಂದಿಗೆ ಯಾವುದೇ ವ್ಯಾಪಾರ ಸಂಬಂಧ ಹೊಂದಿಲ್ಲ. ಇನ್ಫೋಸಿಸ್​ ಯಾವುದೇ ಪ್ರತಿಕೂಲ ಸಂದರ್ಭದಲ್ಲಿ ಸಮುದಾಯದ ಬೆಂಬಲಕ್ಕೆ ನಿಲ್ಲುತ್ತದೆ. ಈಗಾಗಲೇ ಉಕ್ರೇನ್​ನ ಯುದ್ಧದ ಸಂತ್ರಸ್ತರ ಪರಿಹಾರ ಪ್ರಯತ್ನಗಳಿಗಾಗಿ ಕಂಪನಿ ಯುಎಸ್​ಡಿ 1 ಮಿಲಿಯನ್​ ನೀಡಲು ಬದ್ಧವಾಗಿದೆ ಎಂಬ ಹೇಳಿಕೆಯನ್ನು ಇನ್ಫೋಸಿಸ್​ ಬಿಡುಗಡೆ ಮಾಡಿದೆ.

ABOUT THE AUTHOR

...view details