ಉಜ್ಜೈನಿ(ಮಧ್ಯ ಪ್ರದೇಶ):73ನೇ ಇಳಿ ವಯಸ್ಸಿನಲ್ಲೂ ದೇಶ ಸಂಚಾರ ಮಾಡುವ ಉತ್ಸಾಹದಿಂದ ದೆಹಲಿಯ ರಾಜ್ಘಾಟ್ನಿಂದ ಸೈಕಲ್ ಯಾತ್ರೆ ಆರಂಭಿಸಿದ್ದ ಪದ್ಮಶ್ರೀ ಪುರಸ್ಕೃತ ಡಾ. ಕಿರಣ್ ಸೇಠ್ ಇದೀಗ 1500 ಕಿಲೋ ಮೀಟರ್ ಕ್ರಮಿಸಿ ಉಜ್ಜೈನಿ ತಲುಪಿದ್ದಾರೆ. ಯುವಕರಲ್ಲಿ ಸರಳತೆ ಮತ್ತು ಶಿಸ್ತಿನ ಸಂದೇಶ ನೀಡುವ ಉದ್ದೇಶದಿಂದ ಈ ಸಂಚಾರ ಆರಂಭಿಸಿರುವುದಾಗಿ ಅವರು ತಿಳಿಸಿದ್ದಾರೆ.
ಇದೀಗ ದೆಹಲಿ ಕಡೆ ಪ್ರಯಾಣ ಬೆಳೆಸಿರುವ ಪದ್ಮಶ್ರೀ ಪುರಸ್ಕೃತ ಒಟ್ಟು 2500 ಕಿಲೋ ಮೀಟರ್ ದೂರ ಕ್ರಮಿಸಲಿದ್ದಾರೆ.
ಪರಿಸರ, ಸಂಸ್ಕೃತಿ ಬಗ್ಗೆ ಪ್ರಚಾರ: ತಾವು ತಮ್ಮ ಪ್ರಯಾಣದ ವೇಳೆ ಪರಿಸರ ಹಾಗೂ ಸಂಸ್ಕೃತಿ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದು, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾಗಿ ಹೇಳಿಕೊಂಡಿದ್ದಾರೆ. ನಾನು ಸೈಕಲ್ ಸಂಚಾರದ ವೇಳೆ ಯಾವುದೇ ರೀತಿಯ ಆಧುನಿಕ ಸೈಕಲ್ ಬಳಕೆ ಮಾಡಿಲ್ಲ ಎಂದಿರುವ ಅವರು, ಡಿಸೆಂಬರ್ ತಿಂಗಳಲ್ಲಿ ಪಾಂಡಿಚೇರಿಯಿಂದ ಚೆನ್ನೈಗೆ ಸೈಕ್ಲಿಂಗ್ ಮಾಡಿರುವ ವಿಚಾರ ಸಹ ಹೊರಹಾಕಿದ್ದಾರೆ.