ಕರ್ನಾಟಕ

karnataka

ETV Bharat / bharat

Girl murder case: ಗೋಣಿಚೀಲದಲ್ಲಿ ಶವ ಪತ್ತೆ, ಅತ್ಯಾಚಾರ ಶಂಕೆ.. ನಾಲ್ವರು ಆರೋಪಿಗಳು ವಶಕ್ಕೆ - ಮಧ್ಯಪ್ರದೇಶದ ಉಜ್ಜಯಿನಿ

ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಕಾಣೆಯಾದ ಮೂರೂವರೆ ವರ್ಷದ ಬಾಲಕಿಯ ಶವ 24 ಗಂಟೆಗಳ ನಂತರ ಮಧ್ಯಪ್ರದೇಶದ ಉಜ್ಜಯಿನಿಯ ಕಮಲ್ ಕಾಲೋನಿ ಬಳಿಯ ಚರಂಡಿಯಲ್ಲಿ ಗೋಣಿಚೀಲದಲ್ಲಿ ಪತ್ತೆಯಾಗಿದೆ. ಆರೋಪಿಗಳು ಮೃತದೇಹವನ್ನು ಸ್ಥಳಾಂತರ ಮಾಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳೂ ಪತ್ತೆಯಾಗಿವೆ.

minor girl murder case
ಉಜ್ಜಯಿನಿ ಬಾಲಕಿ ಹತ್ಯೆ ಪ್ರಕರಣ

By

Published : Jun 9, 2023, 10:50 AM IST

ಉಜ್ಜಯಿನಿ (ಮಧ್ಯಪ್ರದೇಶ): ಚಿಮಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕಮಲ್ ಕಾಲೋನಿಯಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ ಮೂರೂವರೆ ವರ್ಷದ ಬಾಲಕಿಯ ಶವ 24 ಗಂಟೆಗಳ ನಂತರ ಮುಚ್ಚಿದ ಚರಂಡಿಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಿಂದ ಬಾಲಕಿಯನ್ನು ಕೊಲೆ ಮಾಡಲಾಗಿದ್ದು, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಅಪಹರಣ, ಕೊಲೆ ಮತ್ತು ಸಾಕ್ಷ್ಯ ಮರೆಮಾಚುವಿಕೆ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹ ಸ್ಥಳಾಂತರಗೊಳಿಸುತ್ತಿರುವ ಸಿಸಿಟಿವಿ ದೃಶ್ಯಾವಳಿ ಕೂಡ ಲಭ್ಯವಾಗಿವೆ. ಬಾಲಕಿಯ ಮೂಗು ಮತ್ತು ಬಾಯಿ ಒತ್ತಿ ಉಸಿರುಗಟ್ಟಿಸಿ ಕೊಂದಿದ್ದಾರೆ ಎನ್ನಲಾಗಿದೆ.

ನೆರೆಮನೆಯ ಅಜಯ್(21) ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ, ಬಾಲಕಿ ಉಸಿರುಗಟ್ಟುವಿಕೆಯಿಂದ ಕೊನೆಯುಸಿರೆಳೆದಿದ್ದಾಳೆ. ಗಾಬರಿಯಿಂದ ಅಜಯ್ ಆ ಸಮಯದಲ್ಲಿ ಮನೆಯಲ್ಲಿದ್ದ ತನ್ನ ಸಹೋದರಿ ರಾಣು (19) ಮತ್ತು ತಾಯಿ ಮಿಲನ್ ಬಾಯಿಗೆ ಹೇಳಿದ್ದಾನೆ. ಆತನ ಸಹೋದರಿ ತನ್ನ ಗೆಳೆಯ ವಿಕ್ಕಿ ಠಾಕೂರ್‌ಗೆ ಕರೆ ಮಾಡಿದ್ದಾಳೆ.

ಇದನ್ನೂ ಓದಿ:ಪ್ರೀತಿಸಿದ ಯುವತಿ ಮೇಲೆ ಅತ್ಯಾಚಾರ; ಸ್ನೇಹಿತನಿಂದಲೂ ದುಷ್ಕೃತ್ಯ ಯತ್ನ

ಇಬ್ಬರೂ ಸೇರಿ ಬಾಲಕಿಯ ಬಾಯಿ ಮತ್ತು ಮೂಗು ಒತ್ತಿ ಸಾಯುವವರೆಗೂ ನೀರಿನಲ್ಲಿ ಮುಳುಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆರೋಪಿಗಳು ಬಾಲಕಿಯ ಶವವನ್ನು ಟೆರೇಸ್‌ಗೆ ತೆಗೆದುಕೊಂಡು ಹೋಗಿ ಗೋಣಿಚೀಲದಲ್ಲಿ ತುಂಬಿದ್ದರು. ಆಗ ರಾಣುವಿನ ಗೆಳೆಯ ವಿಕ್ಕಿ ಠಾಕೂರ್ ಬಾಲಕಿಯ ಶವವಿದ್ದ ಗೋಣಿಚೀಲವನ್ನು ಬಿಳಿ ಬಣ್ಣದ ಸ್ಕೂಟರ್‌ನಲ್ಲಿ ವಾಲ್ಮೀಕಿ ಧಾಮ್ ಆಶ್ರಮದ ಸಮೀಪ ಚರಂಡಿಗೆ ಎಸೆದಿದ್ದಾನೆ. ನಂತರ ಮನೆಯವರು ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದರು. ಬಾಲಕಿ ಮನೆಯಲ್ಲಿ ಆಟವಾಡುತ್ತಿದ್ದಾಗ ನೀರಿನ ಟ್ಯಾಂಕ್‌ಗೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು ಎಂದು ತಿಳಿದು ಬಂದಿದೆ.

ತನಿಖೆ ಮುಂದುವರಿದಿದ್ದು, ನಾಲ್ವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಎಸ್​ಪಿ ಆಕಾಶ್ ಭೂರಿಯಾ ತಿಳಿಸಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ಹೆಚ್ಚಿನ ವರದಿಗಳನ್ನು ನಿರೀಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆರೋಪಿ ಅಜಯ್ ಮೇಲೆ ಅತ್ಯಾಚಾರ ಯತ್ನದ ಆರೋಪವಿದೆ. ಸಂತ್ರಸ್ತ ಬಾಲಕಿಯ ತಂದೆ ಅಡುಗೆ ಕೆಲಸ ಮಾಡುತ್ತಿದ್ದರೆ, ಬಾಲಕಿಯ ತಾಯಿ ಅಂಗವಿಕಲರಾಗಿದ್ದು, ನಡೆಯಲು ಸಾಧ್ಯವಾಗುತ್ತಿಲ್ಲ. ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ತಾಯಿ ಮನೆಯೊಳಗಿದ್ದರು. ಮೃತ ಬಾಲಕಿಯ ಕುಟುಂಬ ನೆರೆಹೊರೆಯವರೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿತ್ತು. ಆದ್ದರಿಂದ ಬಾಲಕಿ ಅವರ ಬಳಿಗೆ ಹೋಗಿದ್ದಳು. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಮಹಿಳಾ ಹಾಸ್ಟೆಲ್‌ನಲ್ಲಿ ನಗ್ನ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ; ಶಂಕಿತ ಆರೋಪಿ ಆತ್ಮಹತ್ಯೆ

ABOUT THE AUTHOR

...view details