ಕರ್ನಾಟಕ

karnataka

ETV Bharat / bharat

ವರದಕ್ಷಿಣೆಯಾಗಿ Oxygen Concentrator ಕೊಡುಗೆ: ಹೀಗೊಂದು ಸಮಾಜಮುಖಿ ಮದುವೆ! - ಸೇವಾಧಾಮ್ ಆಶ್ರಮದ ನಿರ್ದೇಶಕ ಸುಧೀರ್ ಭಾಯ್ ಗೋಯೆಲ್

ವರದಕ್ಷಿಣೆ ಅಂದರೆ ಕೇವಲ ಹಣ, ಆಸ್ತಿ, ಚಿನ್ನಾಭರಣ ಅಂದುಕೊಂಡಿರುವ ಈ ಕಾಲದಲ್ಲಿ ಇಲ್ಲೊಬ್ಬ ತಂದೆ ತನ್ನ ಮಗಳು-ಅಳಿಯನಿಗೆ ವಿಭಿನ್ನವಾದ ಉಡುಗೊರೆ ನೀಡಿದ್ಧಾನೆ.

ಆಕ್ಸಿಜನ್​ ಕಾನ್ಸಂಟ್ರೇಟರ್
ಆಕ್ಸಿಜನ್​ ಕಾನ್ಸಂಟ್ರೇಟರ್

By

Published : Jul 8, 2021, 9:30 AM IST

ಉಜ್ಜೈನಿ(ಮಧ್ಯಪ್ರದೇಶ): ಸಾಮಾನ್ಯವಾಗಿ ವರದಕ್ಷಿಣೆಯಾಗಿ ಹಣ, ಚಿನ್ನಾಭರಣ, ಆಸ್ತಿ, ವಾಹನ ಹೀಗೆ ದುಬಾರಿ ವಸ್ತುಗಳನ್ನ ಕೊಡೋದನ್ನ ನೋಡಿದ್ದೀವಿ, ಕೇಳಿದ್ದೀವಿ. ಆದರೆ, ಕೋವಿಡ್ ಅಬ್ಬರ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂದರೆ, ಇಲ್ಲೊಂದು ಕಡೆ ವರದಕ್ಷಿಣೆಯಾಗಿ ಆಕ್ಸಿಜನ್​ ಕಾನ್ಸಂಟ್ರೇಟರ್​ಗಳನ್ನ ನೀಡಿದ್ದಾರೆ.

ಹೌದು, ನಗರದ ಸೇವಾಧಾಮ್ ಆಶ್ರಮದ ನಿರ್ದೇಶಕ ಸುಧೀರ್ ಭಾಯ್ ಗೋಯೆಲ್​ ಕುಟುಂಬದ ಹಿರಿಯ ಮಗಳ ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ಆಮ್ಲಜನಕ ಸಾಂದ್ರೀಕರಣ ಯಂತ್ರಗಳನ್ನು ನೀಡಿದೆ. ಎರಡು ಯಂತ್ರಗಳಿಗೆ 1.40 ಲಕ್ಷ ವೆಚ್ಚ ತಗುಲಿದೆ. ಗೋಯೆಲ್​ ಅವರ ಈ ಕಾರ್ಯಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಎಲ್ಲರ ಮದುವೆಗಳಲ್ಲಿ ಏಳು ಪ್ರತಿಜ್ಞೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಅಂಕಿತ್​​ ಗ್ರಾಮ್ ಹಾಗೂ ಮೋನಿಕಾ ವಿವಾಹ ಕಾರ್ಯಕ್ರಮದಲ್ಲಿ ನವಜೋಡಿಯಿಂದ ಎಂಟು ಪ್ರತಿಜ್ಞೆಗಳನ್ನು ತೆಗೆದುಕೊಳ್ಳಲಾಗಿದೆ. ಯಾರಿಗಾದ್ರೂ ಆಕ್ಸಿಜನ್ ಕಾನ್ಸಂಟ್ರೇಟರ್​ಗಳ ಅವಶ್ಯಕತೆಯಿದ್ದರೆ, ಅವುಗಳನ್ನು ಪೂರೈಸಬೇಕು ಎಂಬ ವಿಭಿನ್ನ ವಚನ ತೆಗೆದುಕೊಳ್ಳಲಾಗಿದೆ. ವಧು ಮೋನಿಕಾ, ಸೇವಾಧಾಮ್ ಆಶ್ರಮದಲ್ಲಿ ದಿವ್ಯಾಂಗರ ಸೇವೆ ಸಲ್ಲಿಸುತ್ತಿದ್ದಾರೆ.

ಮದುವೆಯ ಮತ್ತೊಂದು ವಿಶೇಷವೆಂದರೆ, ಕೋವಿಡ್ ನಿಯಮ ಅನುಸರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 20 ಜನರು ಮೆರವಣಿಗೆ ಮೂಲಕ ಸಾಗಿ ಗಿಡಗಳನ್ನು ನೆಟ್ಟರು. ಈ ಮೂಲಕ ನವದಂಪತಿಗೆ ಶುಭ ಹಾರೈಸಿದರು.

ಇದನ್ನೂ ಓದಿ:‘ವೆಜ್​​ ಮಟನ್​​​’: ನಾನ್​ವೆಜ್​​​ ರುಚಿ ನೀಡುವ ಜಾರ್ಖಂಡ್​ನ ವಿಶೇಷ ಅಣಬೆ

ABOUT THE AUTHOR

...view details