ನವದೆಹಲಿ:ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್‌ಟಿಎ) ಯುಜಿಸಿ-ನೆಟ್ ಫಲಿತಾಂಶ 2022 ಅನ್ನು ನವೆಂಬರ್ 5 ರಂದು ಬಿಡುಗಡೆಗೊಳಿಸಲಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ nta.ac.in ಮತ್ತು ugcnet.nta.nic ನಲ್ಲಿ ಫಲಿತಾಂಶವನ್ನು ತಿಳಿದುಕೊಳ್ಳಬಹುದು.
ನಾಳೆ ಯುಜಿಸಿ-ನೆಟ್ ರಿಸಲ್ಟ್: ನಿಮ್ಮ ಫಲಿತಾಂಶವನ್ನು ಹೀಗೆ ತಿಳಿಯಿರಿ..
ನೆಟ್ ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ನವೆಂಬರ್ 5ರಂದು ಪ್ರಕಟಿಸಲಿದೆ ಎಂದು ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್ ತಿಳಿಸಿದ್ದಾರೆ.
ನಾಳೆ ಬಿಡುಗಡೆಗೊಳ್ಳಲಿದೆ ಯುಜಿಸಿ ನೆಟ್ ಫಲಿತಾಂಶ
ಜುಲೈ 9, 11, 12, ಸೆಪ್ಟೆಂಬರ್ 20, 21, 22, 23, 29, 30, ಅಕ್ಟೋಬರ್ 1, 8, 10, 11, 12, 13, 14 ಮತ್ತು 22ರಂದು ದೇಶಾದ್ಯಂತ ಪರೀಕ್ಷೆ ನಡೆದಿತ್ತು. ಕೀ ಉತ್ತರಗಳನ್ನು ನವೆಂಬರ್ 1 ರಂದು ಬಿಡುಗಡೆ ಮಾಡಲಾಗಿತ್ತು. ಫಲಿತಾಂಶ ಪರಿಶೀಲಿಸಲು ಅಭ್ಯರ್ಥಿಗಳು ಮೇಲ್ಕಂಡ ವೆಬ್‌ಸೈಟ್‌ನಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಮೂಲಕ ಲಾಗಿನ್ ಆಗಬೇಕು.
ಇದನ್ನೂ ಓದಿ:KSOUಗೆ ಯುಜಿಸಿಯಿಂದ ಉನ್ನತ ಶ್ರೇಣಿ.. ವಿಶ್ರಾಂತ ಕುಲಪತಿ ಡಿ. ಶಿವಲಿಂಗಯ್ಯ ಹರ್ಷ