ನವದೆಹಲಿ :ಅಸಿಸ್ಟಂಟ್ ಪ್ರೊಫೆಸರ್ ಹಾಗೂ ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಅಸಿಸ್ಟಂಟ್ ಪ್ರೊಫೆಸರ್ಗೆ ಯುಜಿಸಿ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (NET) ಫಲಿತಾಂಶವನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ugcnet.nta.nic.in ಮತ್ತು ntaresuts.nic ನಲ್ಲಿ ಪರಿಶೀಲಿಸಬಹುದು.
ಅಭ್ಯರ್ಥಿಗಳು ಲಾಗಿನ್ ಆಗುವಾಗ ತಮ್ಮ ಅಪ್ಲಿಕೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು. ಈ ಮೂಲಕ ತಮ್ಮ ಫಲಿತಾಂಶವನ್ನು ನೋಡಬಹುದು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಅಭ್ಯರ್ಥಿಗಳ ಫಲಿತಾಂಶದ ಜೊತೆಗೆ ಯುಜಿಸಿ ಕಟ್ ಆಫ್ ಅಂಕಗಳು ಮತ್ತು ವಿವಿಧ ವಿಷಯಗಳ ಶೇಕಡವಾರು ಫಲಿತಾಂಶವನ್ನು ಪ್ರಕಟಿಸಿದೆ.