ಮುಂಬೈ(ಮಹಾರಾಷ್ಟ್ರ): ಹನುಮಾನ್ ಚಾಲೀಸಾ ಪಠಣ ಪ್ರಕರಣ ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಕೊನೆಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಜೊತೆಗೆ ಬಂಧನಕ್ಕೊಳಗಾಗಿರುವ ಸಂಸದ ನವನೀತ್ ಕೌರ್ ಹಾಗೂ ರವಿ ರಾಣಾಗೂ ಎಚ್ಚರಿಕೆ ನೀಡಿದ್ದಾರೆ.
'ಹನುಮಾನ್ ಚಾಲೀಸಾ ಪಠಿಸಲು ಮನೆಗೆ ಬರಲು ಬಯಸಿದರೆ ನಿಮಗೆ ಸ್ವಾಗತ... ಆದರೆ, ನೀವು ದಾದಾಗಿರಿ ಮಾಡಿದ್ರೆ, ಅದನ್ನ ಹೇಗೆ ತಡೆಯಬೇಕು ಎಂಬುದು ನಮಗೆ ಗೊತ್ತಿದೆ. ಶಿವಸೇನೆ ಮುಖ್ಯಸ್ಥ ಬಾಳ್ ಠಾಕ್ರೆ ನಮಗೆ ಹಿಂದುತ್ವದ ಮೂಲಕ ಕಲಿಸಿದ್ದಾರೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ:ಪ್ಯಾಸೆಂಜರ್ ರೈಲಿನಿಂದ ಬಿದ್ದ ಪ್ರಯಾಣಿಕನನ್ನ ರಕ್ಷಿಸಿದ ಮಹಿಳಾ ಗಾರ್ಡ್.. ವಿಡಿಯೋ
ನಿಮಗೆ ಹಿಂದುತ್ವದ ಬಗ್ಗೆ ಗೊತ್ತಿಲ್ಲವಾದರೆ, ನೀವು ನಮ್ಮ ಬಳಿ ಬರಬಹುದು. ಅದನ್ನ ಕಲಿಸಲು ನಮ್ಮ ಬಳಿ ಮಾರ್ಗವಿದೆ. ನಾವು ಬಾಲ್ಯದಿಂದಲೂ ಹಿಂದುತ್ವದ ಬಗ್ಗೆ ಕಲಿತ್ತಿದ್ದೇವೆ. ಸಾಧು, ಸಂತರು ನಮ್ಮ ಮನೆಗೆ ಭೇಟಿ ನೀಡಿದಾಗ ದೀಪಾವಳಿ, ದಸರಾ ಸಂದರ್ಭದಲ್ಲಿ ನಮ್ಮ ಮನೆಗೆ ಅನೇಕರು ಭೇಟಿ ನೀಡುತ್ತಾರೆ. ಈ ಹಿಂದಿನಿಂದಲೂ ಅದು ನಮ್ಮಲ್ಲಿ ನಡೆದುಕೊಂಡು ಬಂದಿದೆ ಎಂದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಮುಂದೆ ಹನುಮಾನ್ ಚಾಲೀಸಾ ಪಠಣೆ ಮಾಡುವುದಾಗಿ ಘೋಷಿಸಿದ್ದ ಸಂಸದೆ ನವನೀತ್ ಕೌರ್ ಹಾಗೂ ಪತಿ ರವಿ ರಾಣಾ ಅವರನ್ನ ಬಂಧನ ಮಾಡಲಾಗಿದ್ದು, ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ. ಇದೇ ವಿಚಾರವಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಎಚ್ಚರಿಕೆ ಕೂಡಾ ನೀಡಿದ್ದಾರೆ.