ಕರ್ನಾಟಕ

karnataka

ETV Bharat / bharat

ಮಲಿನಗೊಳ್ಳುತ್ತಿದೆ ಪಂಚಗಂಗಾ ನದಿ; ಮಾಲಿನ್ಯ ತಡೆಗಟ್ಟಲು ಸಿಎಂ ಉದ್ಧವ್​ ಮೀಟಿಂಗ್ - ಪಂಚಗಂಗಾ ನದಿಯಲ್ಲಿನ ಮಾಲಿನ್ಯ ಸಮಸ್ಯೆ

ಕೊಲ್ಹಾಪುರ ಮತ್ತು ಪಕ್ಕದ ಪ್ರದೇಶಗಳ ಪಂಚಗಂಗಾ ನದಿಯಲ್ಲಿನ ಮಾಲಿನ್ಯ ಸಮಸ್ಯೆ ಕುರಿತು ಸಿಎಂ ಸಭೆ ನಡೆಸಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೊಲ್ಹಾಪುರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

By

Published : Jan 6, 2021, 8:22 AM IST

ಮುಂಬೈ (ಮಹಾರಾಷ್ಟ್ರ): ಕೊಲ್ಹಾಪುರ ಮತ್ತು ಪಕ್ಕದ ಪ್ರದೇಶಗಳ ಪಂಚಗಂಗಾ ನದಿಯಲ್ಲಿ ಮಾಲಿನ್ಯದ ಮಟ್ಟ ಕುರಿತು ಚರ್ಚಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಸಭೆ ನಡೆಸಿದರು.

ಕೊಲ್ಹಾಪುರ ಮತ್ತು ಪಕ್ಕದ ಪ್ರದೇಶಗಳ ಪಂಚಗಂಗಾ ನದಿಯಲ್ಲಿನ ಮಾಲಿನ್ಯ ಸಮಸ್ಯೆ ಕುರಿತು ಚರ್ಚಿಸಲು ವರ್ಷಾ ಬಂಗಲೆಯಲ್ಲಿ ಸಭೆ ನಡೆಸಲಾಯಿತು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿಯ (ಸಿಎಮ್‌ಒ) ಹೇಳಿದೆ.

ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ (ಎಂಐಡಿಸಿ) ಮತ್ತು ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮನ್ವಯ ಸಮಿತಿಯನ್ನು ರಚಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಇಚಲಕರಂಜಿ ಮತ್ತು ಕೊಲ್ಹಾಪುರ ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಪಂಚಗನಾಗ ನದಿಯಲ್ಲಿ ಮಾಲಿನ್ಯಕಾರಕಗಳನ್ನು ಹೊರಹಾಕಲಾಗುತ್ತಿದೆ. ಈ ಬಗ್ಗೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಹಕ್ಕಿ ಜ್ವರ ಭೀತಿ: ವಿಶೇಷ ಜಾಗರೂಕತೆ ವಹಿಸುವಂತೆ ಅಧಿಕಾರಿಗಳಿಗೆ ಸಿಎಂ ಗೆಹ್ಲೋಟ್ ಸೂಚನೆ

ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೊಲ್ಹಾಪುರ ಜಿಲ್ಲಾಧಿಕಾರಿಗೆ ಸಿಎಂ ಸೂಚನೆ ನೀಡಿದರು. ಪಂಚಗಂಗಾ ನದಿಯಲ್ಲಿನ ಮಾಲಿನ್ಯ ಪರಿಸ್ಥಿತಿಯ ಬಗ್ಗೆ ಪ್ರತಿ ತಿಂಗಳು ಮೌಲ್ಯಮಾಪನ ವರದಿ ನೀಡುವಂತೆ ಸಮನ್ವಯ ಸಮಿತಿಗೆ ಠಾಕ್ರೆ ನಿರ್ದೇಶಿಸಿದ್ದಾರೆ.

ABOUT THE AUTHOR

...view details