ಜೈಪುರ (ರಾಜಸ್ಥಾನ):ಉದಯಪುರ ಹಿಂದು ವ್ಯಕ್ತಿ ಶಿರಚ್ಛೇದ ಘಟನೆ ಭಯೋತ್ಪಾದಕ ದಾಳಿಯೇ ಅಥವಾ ಅಲ್ಲವೇ ಎಂಬ ಬಗ್ಗೆ ಎನ್‌ಐಎ ಮತ್ತು ಎಟಿಎಸ್ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿವೆ. ಎನ್‌ಐಎ ತನಿಖೆಯಲ್ಲಿ ಹಂತಕ ಪಾಕಿಸ್ಥಾನದ ಜೊತೆ ಸಂಪರ್ಕ ಹೊಂದಿದ್ದಾನೆ ಎಂದರೆ, ಎಟಿಎಸ್ ಇದು ಭಯೋತ್ಪಾದಕ ದಾಳಿಯಲ್ಲ ಎಂದಿದೆ. ಈ ಮಧ್ಯೆಯೇ ಗೃಹ ಖಾತೆ ರಾಜ್ಯ ಸಚಿವ ರಾಜೇಂದ್ರ ಯಾದವ್ ಕೂಡ ಇದು ಭಯೋತ್ಪಾದಕ ದಾಳಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ರಾಜೇಂದ್ರ ಯಾದವ್, ಘಟನೆಯನ್ನು ಎನ್‌ಐಎ ಭಯೋತ್ಪಾದಕ ದಾಳಿ ಎಂದು ಎಲ್ಲಿಯೂ ಹೇಳಿಕೆ ನೀಡಿಲ್ಲ. ಹಂತಕ ವಿರೋಧ ಪಕ್ಷದ ನಾಯಕ ಗುಲಾಬ್‌ಚಂದ್ ಕಟಾರಿಯಾ ಅವರ ಇರುವ ಫೋಟೋಗಳು ಹರಿದಾಡುತ್ತಿವೆ. ಅವನು ಕಟಾರಿಯಾ ಕ್ಷೇತ್ರದ ಮತಗಟ್ಟೆ ಏಜೆಂಟ್ ಕೂಡ ಆಗಿದ್ದ. ಹೀಗಾಗಿ ಇದು ಭಯೋತ್ಪಾದಕ ದಾಳಿ ಎಂದು ಹೇಳಲಾಗದು ಎಂದಿದ್ದಾರೆ.