ಕರ್ನಾಟಕ

karnataka

ETV Bharat / bharat

ಹೊಟ್ಟೆಯೊಳಗಿತ್ತು 7.36 ಕೋಟಿ ರೂಪಾಯಿ ಹೆರಾಯಿನ್!: ಇಬ್ಬರು ಜಾಂಬಿಯನ್​ಗಳ ಬಂಧನ - Heroin

ತಮ್ಮ ಹೊಟ್ಟೆಯಲ್ಲಿ 1,052 ಗ್ರಾಮ್ ಮಾದಕ ವಸ್ತುವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಕಸ್ಟಂ ಅಧಿಕಾರಿಗಳ ಬಂಧಿಸಿದ್ದಾರೆ.

Two Zambian men held for smuggling heroin worth Rs 7.36 cr at Delhi airport
ಹೊಟ್ಟೆಯೊಳಗೆ 7.36 ಕೋಟಿ ರೂಪಾಯಿ ಹೆರಾಯಿನ್ ಕಳ್ಳಸಾಗಣೆ ಯತ್ನ: ಇಬ್ಬರ ಜಾಂಬಿಯನ್​ಗಳ ಬಂಧನ

By

Published : Jul 7, 2021, 8:56 PM IST

ನವದೆಹಲಿ:7.36 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ದೆಹಲಿ ವಿಮಾನ ನಿಲ್ದಾಣ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇಬ್ಬರೂ ಆರೋಪಿಗಳು ಜಾಂಬಿಯಾ ದೇಶದವರಾಗಿದ್ದು, ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಿಂದ ಆಡಿಸ್ ಅಬಾಬಾ ಮಾರ್ಗವಾಗಿ ದೆಹಲಿಗೆ ಆರೋಪಿಗಳು ಪ್ರಯಾಣಿಸಿದ್ದರು. ಫ್ಲೈಟ್ ಇಟಿ 588 ಮೂಲಕ ಅವರು ದೆಹಲಿಗೆ ಬಂದಿದ್ದು, ತಮ್ಮ ಹೊಟ್ಟೆಯಲ್ಲಿ 1052 ಗ್ರಾಮ್ ಮಾದಕ ವಸ್ತುವನ್ನು ಮಾತ್ರೆಗಳನ್ನಾಗಿ ಹೊಟ್ಟೆಯೊಳಗೆ ಅಡಗಿಸಿಟ್ಟುಕೊಂಡು ಕಳ್ಳಸಾಗಣೆಗೆ ಯತ್ನಿಸಿದ್ದರು ಎಂದು ಕಸ್ಟಮ್ಸ್ ಇಲಾಖೆ ಟ್ವಿಟರ್​ನಲ್ಲಿ ಮಾಹಿತಿ ನೀಡಿದೆ.

ಇದನ್ನೂ ಓದಿ:2 ರೂಪಾಯಿಗೆ ಔಷಧ​, 8 ಲಕ್ಷ ರೋಗಿಗಳ ಸೇವೆ: ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಡಾ.ಮಹೇಂದ್ರಭಾಯ್​

ABOUT THE AUTHOR

...view details