ಖಗಾರಿಯಾ(ಬಿಹಾರ): ರೈಲ್ವೇ ಸೇತುವೆ ಮೇಲೆ ರೀಲ್ಸ್ ಶೂಟ್ ಮಾಡಲು ಹೋಗಿ ಇಬ್ಬರು ಸ್ನೇಹಿತರು ಸಾವನ್ನಪ್ಪಿದ್ದು, ಇನ್ನೋರ್ವ ಬಾಲಕ ನದಿಗೆ ಹಾರಿ ಪ್ರಾಣ ಉಳಿಸಿಕೊಂಡಿರುವ ಘಟನೆ ಬಿಹಾರದ ಖಗಾರಿಯಾದಲ್ಲಿ ನಡೆದಿದೆ.
ಮೃತರನ್ನು ಖಗಾರಿಯ ಮೂಲದ ಸೋನು ಮತ್ತು ನಿತೀಶ್ ಎಂದು ಗುರುತಿಸಲಾಗಿದೆ. ರೈಲ್ವೇ ಸೇತುವೆಯಿಂದ ನದಿಗೆ ಜಿಗದವನ ಹೆಸರು ಅಮನ್ ಎಂದು ತಿಳಿದು ಬಂದಿದೆ. ಮೂವರು ಸ್ನೇಹಿತರು ಹೊಸ ವರ್ಷದ ದಿನದಂದು ಧಮಾರಾ ಘಾಟ್ ನಿಲ್ದಾಣದ ಬಳಿಯ ಮಾ ಕಾತ್ಯಾಯನಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಮುಖ್ಯ ರಸ್ತೆಯಲ್ಲಿ ಜನಸಂದಣಿ ಮತ್ತು ದೂರವಾಗುತ್ತದೆ ಎಂಬ ಕಾರಣಕ್ಕೆ ಪರ್ಯಾಯ ಮಾರ್ಗದ ಮೂಲಕ ದೇವಸ್ಥಾನಕ್ಕೆ ಹತ್ತಿರವಾಗುತ್ತದೆ ಎಂದು ರೈಲ್ವೇ ಸೇತುವೆಯ ದಾರಿ ಹಿಡಿದು ಹೊರಟಿದ್ದರು.