ಅಮೃತಸರ:ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣದಲ್ಲಿ ವಿದೇಶಿ ಕರೆನ್ಸಿ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದೆ. ಈ ಕರೆನ್ಸಿಯ ಮೌಲ್ಯವು 32.86 ಲಕ್ಷ ರೂಪಾಯಿಗಳಾಗಿವೆ. ಲಗೇಜು ತಪಾಸಣೆ ನಡೆಸುತ್ತಿದ್ದ ವೇಳೆ ಈ ಕರೆನ್ಸಿಗಳು ಪತ್ತೆಯಾಗಿವೆ.
ಅಮೃತಸರದಿಂದ ದುಬೈಗೆ ಏರ್ ಇಂಡಿಯಾ ವಿಮಾನ ಟೇಕ್ಆಫ್ ಸಜ್ಜಾಗಿತ್ತು. ಈ ವೇಳೆ ಸಿಐಎಸ್ಎಫ್ ಪೊಲೀಸರು ಪ್ರಯಾಣಿಕರ ಲಗೇಜ್ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಪ್ರಯಾಣಿಕರ ಬ್ಯಾಗ್ನಲ್ಲಿ ವಿಚಿತ್ರವಾದ ವಸ್ತುಗಳು ಕಂಡುಬಂದಿವೆ. ಹೊರತೆಗೆದು ಪರಿಶೀಲಿಸಿದಾಗ ಅವು ವಿದೇಶಿ ಕರೆನ್ಸಿಗಳು ಎಂದು ತಿಳಿದುಬಂದಿದೆ.