ಕರ್ನಾಟಕ

karnataka

ETV Bharat / bharat

ಪುಲ್ವಾಮಾ ದಾಳಿಯ ಮಾಸದ ನೆನಪು: ಆ ಕರಾಳ ದಿನಕ್ಕೆ ಎರಡು ವರ್ಷ - ಪುಲ್ವಾಮಾ ದಾಳಿ ಸುದ್ದಿ

ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹೊತ್ತ ಬಸ್‌ಗೆ ಸ್ಫೋಟಕಗಳನ್ನು ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದ ಪರಿಣಾಮ, ಭಾರತೀಯ ಯೋಧರು ವೀರಮರಣವನ್ನಪ್ಪಿದ್ದರು. 39ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ಆ ಕರಾಳ ದಿನಕ್ಕೆ ಇಂದು ಎರಡು ವರ್ಷ ತಂಬಿದೆ.

ಪುಲ್ವಾಮಾ ದಾಳಿಯ ಮಾಸದ ನೆನಪು
ಪುಲ್ವಾಮಾ ದಾಳಿಯ ಮಾಸದ ನೆನಪು

By

Published : Feb 14, 2021, 10:06 AM IST

Updated : Feb 14, 2021, 10:13 AM IST

ನವದೆಹಲಿ: ಇಂದಿಗೆ ಪುಲ್ವಾಮಾ ಭಯೋತ್ಪಾದಕ ದಾಳಿಯ ಕರಾಳ ನೆನಪಿಗೆ ಎರಡು ವರ್ಷ. ಫೆಬ್ರವರಿ 14, 2019 ರಂದು ಈ ಭಯೋತ್ಪಾದಕ ದಾಳಿ ನಡೆದಿತ್ತು. ಆದರೆ ಆ ಘಟನೆಯ ಗಾಯಗಳು ಮಾತ್ರ ನೆನಪಿನ ಪುಸ್ತಕದಲ್ಲಿ ಹಾಗೆಯೇ ಉಳಿದಿವೆ.

ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹೊತ್ತ ಬಸ್‌ಗೆ ಸ್ಫೋಟಕಗಳನ್ನು ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ ಪರಿಣಾಮ, ಭಾರತೀಯ ಯೋಧರು ವೀರಮರಣವನ್ನಪ್ಪಿದ್ದರು. ಪಾಕಿಸ್ತಾನಿ ಉಗ್ರರ ಅಟ್ಟಹಾಸಕ್ಕೆ ಸಿಲುಕಿ 39ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು.

ಜೈಷ್-ಎ-ಮೊಹಮ್ಮದ್ ಎಂಬ ಭಯೋತ್ಪಾದಕ ಸಂಘಟನೆಯು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತು. ಈ ದಾಳಿಯ ನಂತರ ಭಾರತವು ತಕ್ಕ ಪ್ರತ್ಯುತ್ತರ ನೀಡಿತ್ತು. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಯ ಬಾಲಕೋಟ್​ನಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ವಾಯುದಾಳಿ ನಡೆಸಿತ್ತು.

ಪುಲ್ವಾಮಾ ಘಟನೆಯಲ್ಲಿ ಹುತಾತ್ಮರಾದ ಯೋಧರಿಗೆ ಇಂದು ಇಡೀ ದೇಶಾದ್ಯಂತೆ ಈ ಗೌರವ ಸಲ್ಲಿಸಲಾಗುತ್ತಿದೆ.

Last Updated : Feb 14, 2021, 10:13 AM IST

ABOUT THE AUTHOR

...view details