ಸೂರತ್(ಗುಜರಾತ್):ಅಪಾರ್ಟ್ಮೆಂಟ್ವೊಂದರ 8ನೇ ಮಹಡಿಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ಅಲ್ಲೇ ಇದ್ದ ಗ್ರಿಲ್ಸ್ ಮೇಲೆ ಹತ್ತಿ ಕೆಳಗೆ ಇಣುಕಲು ಯತ್ನಿಸುತ್ತಿದ್ದಾಗ ಆಯತಪ್ಪಿ ಕೆಳಕ್ಕೆ ಬಿದ್ದ ಆಘಾತಕಾರಿ ಘಟನೆ ಸೂರತ್‌ನಲ್ಲಿ ನಡೆದಿದೆ.
ಆಟವಾಡುತ್ತಾ 8ನೇ ಮಹಡಿಯಿಂದ ಕೆಳಗೆ ಬಿದ್ದ 2 ವರ್ಷದ ಮಗು: ಸಿಸಿಟಿವಿಯಲ್ಲಿ ದೃಶ್ಯ ಸೆರೆ - two year old child death news
ಸೂರತ್ನ ಕತರ್ಗಾಮ್ ಪ್ರದೇಶದ ಅಪಾರ್ಟ್ಮೆಂಟ್ವೊಂದರ 8 ನೇ ಮಹಡಿಯಿಂದ 2 ವರ್ಷದ ಬಾಲಕನೊಬ್ಬ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
8 ನೇ ಮಹಡಿಯಿಂದ ಕೆಳಗೆ ಬಿದ್ದ ಬಾಲಕ
ಕತರ್ಗಾಮ್ ಪ್ರದೇಶದ ಲಕ್ಷ್ಮಿ ರೆಸಿಡೆನ್ಸಿಯ ಎಂಟನೇ ಮಹಡಿಯಲ್ಲಿ ಎರಡು ವರ್ಷದ ಬಾಲಕನೊಬ್ಬ ಪೋಷಕರಿಗೆ ತಿಳಿಸದೇ ಫ್ಲ್ಯಾಟ್‌ನಿಂದ ಹೊರಬಂದು ಪಕ್ಕದಲ್ಲಿದ್ದ ಕಬ್ಬಿಣದ ಸರಳಿನ ಮೇಲೆ ಹತ್ತಲು ಮುಂದಾಗಿದ್ದಾನೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕತರ್ಗಾಮ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.