ಪಟಿಯಾಲ (ಪಂಜಾಬ್):ಇಬ್ಬರು ಮಹಿಳೆಯರು ಮಾನವೀಯತೆಯ ಮರೆತು ನಾಯಿಯನ್ನ ಸ್ಕೂಟಿ ಹಿಂದೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವುದು ವರದಿಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಆದರ್ಶ ನಗರದ ಬಳಿ ಸ್ಕೂಟರ್ ಹಿಂದೆ ಹಗ್ಗಕ್ಕೆ ನಾಯಿ ಕಟ್ಟಿ ಎಳೆಯಲಾಗಿದೆ. ಸ್ಪಲ್ಪ ದೂರ ಎಳೆದಾಗ ಅಲ್ಲಿದ್ದ ಸ್ಥಳೀಯರು ಅವರನ್ನು ಅಡ್ಡಗಟ್ಟಿದ್ದು, ಬಳಿಕ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
ದಾರಿಯುದ್ದಕ್ಕೂ ನಾಯಿಯನ್ನು ಎಳೆದುಕೊಂಡು ಹೋಗಿ ಒಂದೆಡೆ ಸ್ಕೂಟಿ ನಿಲ್ಲಿಸಿ ನಾಯಿಯನ್ನು ಅಲ್ಲಿಯೇ ಕಟ್ಟಲು ಮುಂದಾಗಿದ್ದಾರೆ. ಈ ವೇಳೆ ಸ್ಥಳೀಯರು ಪ್ರಶ್ನಿಸಿದ್ದು, ಭಯದಿಂದ ನಾಯಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಇಬ್ಬರು ಮಹಿಳೆಯರನ್ನೂ ಪೊಲೀಸರು ಬಂಧಿಸಿದ್ದರು. ನಂತರ ಸ್ಥಳಿಯರೇ ನಾಯಿಗೆ ಚಿಕಿತ್ಸೆ ನೀಡಿದ್ದು, ಪಶು ಆಸ್ಪತ್ರೆಗೆ ರವಾನಿಸಿದ್ದಾರೆ.