ಪತ್ತನಂತಿಟ್ಟ(ಕೇರಳ):ದೇವರನಾಡು ಕೇರಳದಲ್ಲಿ ದೇಶವನ್ನೇ ಬೆಚ್ಚಿಬೀಳಿಸುವಂತ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆರ್ಥಿಕ ಏಳಿಗೆಗಾಗಿ ಇಬ್ಬರು ಮಳೆಯರನ್ನು ನರಬಲಿ ಕೊಟ್ಟಿರುವ ಅಮಾನವೀಯ ಘಟನೆ ಪತ್ತನಂತಿಟ್ಟ ಜಿಲ್ಲೆಯ ಎಳಂದೂರಿನಲ್ಲಿ ನಡೆದಿದೆ.
ಎಳಂದೂರು ಗ್ರಾಮದಲ್ಲಿ ಆರ್ಥಿಕ ಸಮೃದ್ಧಿಗಾಗಿ ಮಾಟಮಂತ್ರದ ಹೆಸರಿನಲ್ಲಿ ಇಬ್ಬರು ಮಹಿಳೆಯರನ್ನು ಬಲಿ ನೀಡಲಾಗಿದೆ. ಮಾಂತ್ರಿಕ ಮತ್ತು ಆತನ ಪತ್ನಿಯ ಸಹಾಯದಿಂದ ಕೊಚ್ಚಿ ಮೂಲದ ಮಹಿಳೆಯರನ್ನು ಅಪಹರಿಸಿ ನಂತರ ಹತ್ಯೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಇದುವರೆಗೆ ಮೂವರನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಮುಹಮ್ಮದ್ ಶಫಿ ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ನಂತರ ಅಪಹರಿಸಿದ್ದಾರೆ. ಈ ಮಹಿಳೆಯರು ಸೆಪ್ಟೆಂಬರ್ 26 ರಂದು ನಾಪತ್ತೆಯಾಗಿದ್ದರು. ಮೃತರನ್ನು ಕಡವಂತರ ನಿವಾಸಿ ಪದ್ಮಮ್ (52) ಮತ್ತು ಕಾಲಡಿ ನಿವಾಸಿ ರೋಸಿಲಿ (50) ಎಂದು ಗುರುತಿಸಲಾಗಿದೆ.