ಒಡಿಶಾ :ಇಲ್ಲಿನ ಗಂಜಾಂ ಜಿಲ್ಲೆಯ ದಿಗಾಪಹಂಡಿಯ ಫಾಸಿಗುಡಾದಲ್ಲಿ ಭೂ ಕುಸಿತ ಉಂಟಾಗಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ, ದಿಗಾಪಹಂಡಿ ಫಾಸಿಗುಡ ಪಂಚಾಯತ್‌ನ ಫಾಸಿಗುಡ ಗ್ರಾಮದಲ್ಲಿ ಚೆಕ್ ಡ್ಯಾಮ್ ಸ್ಥಾಪಿಸಲಾಗುತ್ತಿದೆ. ಭೂಕುಸಿತ ಸಂಭವಿಸಿದಾಗ ಕಾರ್ಮಿಕರು ನಿರ್ಮಾಣ ಹಂತದಲ್ಲಿದ್ದ ಅಣೆಕಟ್ಟಿನಡಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.