ಕೊಡರ್ಮಾ (ಜಾರ್ಖಂಡ್): ಒಬ್ಬ ಪುರುಷನಿಗಾಗಿ ಇಬ್ಬರು ಮಹಿಳೆಯರು ರಸ್ತೆ ಮಧ್ಯೆಯೇ ಕಿತ್ತಾಟ ನಡೆಸಿದ ಘಟನೆ ಜಾರ್ಖಂಡ್ನ ಕೊಡರ್ಮಾ ಜಿಲ್ಲೆಯಲ್ಲಿ ನಡೆದಿದೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಗಲಾಟೆ ಸೃಷ್ಟಿಸುತ್ತಿದ್ದ ಮಹಿಳೆಯರಿಬ್ಬರು ಹಾಗೂ ಇವರ ಪತಿ ಎನ್ನಲಾಗುವ ವ್ಯಕ್ತಿಯನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ:ಮದುವೆ ನಿಶ್ಚಯವಾಗಿದ್ದ ಯುವತಿ ಅಪಹರಿಸಿ ಮರುಭೂಮಿಯಲ್ಲಿ ಎತ್ತಿಕೊಂಡು 'ಸಪ್ತಪದಿ' ತುಳಿದ!
ಇಲ್ಲಿನ ಝಂಡಾ ಚೌಕ್‌ನಲ್ಲಿ ಇಬ್ಬರು ಮಹಿಳೆಯರು ನಡುವೆ ಹಠಾತ್ ಗಲಾಟೆ ಪ್ರಾರಂಭವಾಗಿತ್ತು. ಏನಾಗುತ್ತಿದೆ ಎಂದು ತಿಳಿಯದ ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಸ್ವಲ್ಪ ಹೊತ್ತಿನ ಬಳಿಕ ಒಬ್ಬ ಪುರುಷನಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಜಗಳವಾಡುತ್ತಿರುವುದು ಕಂಡುಬಂದಿದೆ. ನಂತರದಲ್ಲಿ ನಡುರಸ್ತೆಯಲ್ಲಿ ಈ ಗಲಾಟೆ ವಿಕೋಪಕ್ಕೆ ತಿರುಗಿದೆ. ಇದರಿಂದ ಸ್ಥಳದಲ್ಲಿ ಜಮಾಯಿಸಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗಂಡ-ಹೆಂಡತಿಯ ನಡುವೆ ಎರಡನೇ ಮಹಿಳೆಯ ಪ್ರವೇಶ: ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ಆಗ ಸಂದೀಪ್ ರಾಮ್ ಎಂಬಾತನಿಗಾಗಿ ಈ ಇಬ್ಬರು ಮಹಿಳೆಯರ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ಗೊತ್ತಾಗಿದೆ. 2015ರಲ್ಲಿ ಗುಡಿಯಾ ದೇವಿಯೊಂದಿಗೆ ಸಂದೀಪ್ ಪ್ರೇಮ ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದರೆ, ಇದರ ನಡುವೆ ಮತ್ತೊಬ್ಬ ಮಹಿಳೆ ಸಂದೀಪ್ ತನ್ನನ್ನು ಮದುವೆಯಾಗಿದ್ದಾರೆ ಎಂದು ಹೇಳಿಕೊಂಡು ಇವರ ದಾಂಪತ್ಯ ಜೀವನದ ಮಧ್ಯೆ ಎಂಟ್ರಿ ಕೊಟ್ಟಿದ್ದಾರೆ.