ಕರ್ನಾಟಕ

karnataka

By

Published : Oct 18, 2022, 1:05 PM IST

ETV Bharat / bharat

ಎರಡು ಕಾಡಾನೆಗಳ ಕಳೇಬರ ಪತ್ತೆ.. ವಿಷಪ್ರಾಶನ ಶಂಕೆ

ಅಸ್ಸೋಂನಲ್ಲಿ ಎರಡು ಕಾಡಾನೆ ಶವ ಪತ್ತೆಯಾಗಿವೆ. ಒಂದು ಆನೆ ಇತರ ಆನೆಗಳೊಂದಿಗೆ ಹೋರಾಡಿ ಸಾವನ್ನಪ್ಪಿದರೆ, ಮತ್ತೊಂದು ಆನೆಯನ್ನು ದುಷ್ಕರ್ಮಿಗಳು ವಿಷ ಹಾಕಿ ಕೊಂದಿದ್ದಾರೆ ಎನ್ನಲಾಗ್ತಿದೆ.

Two Wild elephant found dead in Assam
ಅಸ್ಸಾಂನಲ್ಲಿ ಎರಡು ಕಾಡಾನೆ ಶವ ಪತ್ತೆ

ನಾಗಾಂವ್ (ಅಸ್ಸೋಂ):ರಾಜ್ಯದ ನಾಗಾಂವ್ ಜಿಲ್ಲೆಯ ಭತ್ತದ ಗದ್ದೆಯಲ್ಲಿ ಕಾಡಾನೆ ಮೃತದೇಹ ಪತ್ತೆಯಾಗಿದೆ. ಸುಮಾರು 7 ವರ್ಷದ ಆನೆ ಶವ ಜಖಲಬಂಧ್ ಪ್ರದೇಶದ ಕಿಲಿಂಗ್ ಗ್ರಾಮದಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದು ಬೆಳಗ್ಗೆ ಈ ಪ್ರದೇಶದಲ್ಲಿ ಕಾಡಾನೆಯೊಂದು ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ಮತ್ತು ಅರಣ್ಯ ಸಿಬ್ಬಂದಿ ನಮಗೆ ಮಾಹಿತಿ ನೀಡಿದರು. ಪ್ರಾಥಮಿಕವಾಗಿ ನೋಡಿದರೆ ಆನೆಯು ಇತರ ಆನೆಗಳೊಂದಿಗೆ ಹೋರಾಡಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ವಿಷ ಹಾಕಿ ಕೊಂದ ದುಷ್ಕರ್ಮಿಗಳು:ಇಲ್ಲಿನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಳಿಯ ಕಾಡಿನಲ್ಲಿ ಸೋಮವಾರ ಆನೆ ಮರಿಯ ಕಳೇಬರ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಪ್ರಕಾರ ಆನೆಗೆ ದುಷ್ಕರ್ಮಿಗಳು ವಿಷ ಹಾಕಿ ಕೊಂದಿದ್ದಾರೆ ಎನ್ನಲಾಗ್ತಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಅದೇ ಸ್ಥಳದಲ್ಲಿ ಹೂಳಲಾಯಿತು.

ಗೋಲ್ಪಾರಾದಲ್ಲಿ ಈ ತಿಂಗಳು ಮೂರು ಕಾಡು ಆನೆಗಳು ಸಾವನ್ನಪ್ಪಿವೆ ಎಂಬುದು ಗಮನಿಸಬೇಕಾದ ಸಂಗತಿ. ಅಸ್ಸೋಂನ ಜೋರ್ಹತ್ ಜಿಲ್ಲೆಯ ಖರಿಕಟಿಯಾ ರೈಲು ನಿಲ್ದಾಣದ ಬಳಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದು ಹೆಣ್ಣಾಣೆ ಆನೆ ಮತ್ತು ಅದರ ಮರಿಗಳು ಸಾವನ್ನಪ್ಪಿದ್ದವು.

ಇದನ್ನೂ ಓದಿ:ಕಾಡಾನೆ ದಾಳಿ: ಕೇರಳ ಮೂಲದ ವ್ಯಕ್ತಿ ಸಾವು!

ABOUT THE AUTHOR

...view details