ಕರ್ನಾಟಕ

karnataka

ETV Bharat / bharat

ಅಪ್ಪನ ಸೋಲಿಗೆ ಸೇಡು ತೀರಿಸಿಕೊಂಡ ಹೆಣ್ಮಕ್ಕಳು: ಉತ್ತರಾಖಂಡ ಚುನಾವಣೆಯಲ್ಲಿ ಗೆದ್ದು ಇತಿಹಾಸ! - Elections 2022

ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಇಬ್ಬರು ಹೆಣ್ಣು ಮಕ್ಕಳು ತಮ್ಮ ತಂದೆಯ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.

UTTARAKHAND TWO DAUGHTER WIN
UTTARAKHAND TWO DAUGHTER WIN

By

Published : Mar 10, 2022, 5:49 PM IST

Updated : Mar 10, 2022, 6:01 PM IST

ಡೆಹ್ರಾಡೂನ್​(ಉತ್ತರಾಖಂಡ):ಬಹುತೇಕಹೆಣ್ಣು ಮಕ್ಕಳಿಗೆ ತಂದೆಯೇ ಮೊದಲ ಹೀರೋ, ರೋಲ್ ಮಾಡೆಲ್ ಕೂಡಾ. ಜನ್ಮ ನೀಡಿದ ತಂದೆಯ ಸೋಲನ್ನು ಅವರು ಸಹಿಸಿಕೊಳ್ಳಲಾರರು. ಇಂಥದ್ದೇ ಸನ್ನಿವೇಶದಲ್ಲಿ ಉತ್ತರಾಖಂಡ ರಾಜ್ಯದ ಇಬ್ಬರು ಹೆಣ್ಣು ಮಕ್ಕಳು ತಮ್ಮ ತಂದೆಯರ ಸೋಲಿಗೆ ಇದೀಗ ವಿಶೇಷ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ.

ಪ್ರಸ್ತುತ ವಿಧಾನಸಭೆ ಚುನಾವಣೆ ಕಣಕ್ಕಿಳಿದಿದ್ದ ಅನುಪಮಾ ರಾವತ್​ ಮತ್ತು ರಿತು ಖಂಡೂರಿ ಎಂಬಿಬ್ಬರು ಮಹಿಳೆಯರು ತಮ್ಮ ಎದುರಾಳಿ ಸ್ಪರ್ಧಿಗಳ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಇದೀಗ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗು ಮಾಜಿ ಸಿಎಂ ಹರೀಶ್ ರಾವತ್ ಮತ್ತು ಬಿಜೆಪಿಯ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಅವರ ಈ ಸುಪುತ್ರಿಯರು ತಮ್ಮ ಅಪ್ಪನ ಸೋಲಿಗೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

ಉತ್ತರಾಖಂಡದ ಕೊಟ್‌ದ್ವಾರ್ (ಗ್ರಾಮೀಣ) ಕ್ಷೇತ್ರದಿಂದ ಅನುಪಮಾ ರಾವತ್​ ಮತ್ತು ಕೊಟ್‌ದ್ವಾರ ವಿಧಾನಸಭೆ ಕ್ಷೇತ್ರದಿಂದ ರಿತು ಖಂಡೂರಿ ಭೂಷಣ್​​ ಕಣಕ್ಕಿಳಿದು ಗೆದ್ದು ಸಂಭ್ರಮಿಸಿದ್ದಾರೆ. 2012ರ ವಿಧಾನಸಭೆ ಚುನಾವಣೆಯಲ್ಲಿ ಭುವನ್ ಚಂದ್ರ ಖಂಡೂರಿ ಅವರು ಕೊಟ್‌ದ್ವಾರ ಕ್ಷೇತ್ರದಲ್ಲಿ ಸೋಲು ಕಂಡಿದ್ದರೆ, 2017ರ ಚುನಾವಣೆಯಲ್ಲಿ ಹರಿದ್ವಾರ ಗ್ರಾಮೀಣ ಕ್ಷೇತ್ರದಲ್ಲಿ ಹರೀಶ್ ರಾವತ್ ವೈಫಲ್ಯ ಅನುಭವಿಸಿದ್ದರು.

ಇದನ್ನೂ ಓದಿ:ಬಿಜೆಪಿ ಭದ್ರಕೋಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಯೋಗಿ ಆದಿತ್ಯನಾಥ್‌ಗೆ ಗೆಲುವು

2012ರ ಚುನಾವಣೆಯಲ್ಲಿ ಕೊಟ್‌ದ್ವಾರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸುರೇಂದ್ರ ಸಿಂಗ್ ನೇಗಿ ಅವರು ಖಂಡೂರಿ ಅವರನ್ನು 4,623 ಮತಗಳಿಂದ ಸೋಲಿಸಿದ್ದರು. ಹರಿದ್ವಾರ ಗ್ರಾಮೀಣ ಕ್ಷೇತ್ರದಲ್ಲಿ ಹರೀಶ್ ರಾವತ್ ಅವರು ಬಿಜೆಪಿಯ ಸ್ವಾಮಿ ಯತೀಶ್ವರಾನಂದ ಅವರೆದುರು 12,278 ಮತಗಳಿಂದ ಸೋಲು ಕಂಡಿದ್ದರು. ವಿಶೇಷವೆಂದರೆ, ಈ ಸಲದ ಚುನಾವಣೆಯಲ್ಲಿ ತಮ್ಮ ತಂದೆಯರನ್ನು ಸೋಲಿಸಿದ ಅದೇ ಅಭ್ಯರ್ಥಿಗಳ ವಿರುದ್ಧವೇ ಅವರ ಹೆಣ್ಣುಮಕ್ಕಳು ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ.

ಇದನ್ನೂ ಓದಿ:ಬಿಜೆಪಿಗೆ ಗೆಲುವು, ಸಿಎಂಗೆ ಸೋಲು! ದೇವಭೂಮಿಯಲ್ಲಿ ಮರುಕಳಿಸಿದ ವಿಚಿತ್ರ ಫಲಿತಾಂಶ!

Last Updated : Mar 10, 2022, 6:01 PM IST

ABOUT THE AUTHOR

...view details