ಚೆನ್ನೈ(ತಮಿಳುನಾಡು):ತಮಿಳುನಾಡಿನ ರಾಜ್ಯ ಕೈಗಾರಿಕೆಗಳ ಉತ್ತೇಜನ ನಿಗಮಕ್ಕೆ (ಸಿಪ್ಕಾಟ್) 1.80 ಕೋಟಿ ವೆಚ್ಚದಲ್ಲಿ ಶ್ರೀಪೆರಂಬದೂರಿನಲ್ಲಿ ಹೊಸದಾಗಿ ನಿರ್ಮಿಸಲಾದ ಕಟ್ಟಡವನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ.
ಈ ವೇಳೆ, ಮುಖ್ಯಮಂತ್ರಿ ಉದ್ಘಾಟಿಸಿದ ಕಚೇರಿ ಕಟ್ಟಡದಲ್ಲಿ ಒಂದೇ ಬಾತ್ ರೂಂನಲ್ಲಿ ಎರಡು ಪಾಶ್ಚಿಮಾತ್ಯ ಶೌಚಾಲಯಗಳನ್ನು ಅಕ್ಕಪಕ್ಕದಲ್ಲಿ ಸ್ಥಾಪಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.