ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರ: ಆವಂತಿಪೊರಾ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ - ಆವಂತಿಪೊರಾ ಎನ್‌ಕೌಂಟರ್​ನಲ್ಲಿ ಉಗ್ರರ ಸಾವು

ಆವಂತಿಪೊರಾದ ರಾಜಪೊರಾ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಗಳು ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿವೆ.

Two terrorists were neutralized in jammu and kashmir, Two terrorists killed in Awantipora encounter, encounter in jammu and kashmir, ಜಮ್ಮು ಕಾಶ್ಮೀರದಲ್ಲಿ ಉಗ್ರರ ಸಾವು, ಆವಂತಿಪೊರಾ ಎನ್‌ಕೌಂಟರ್​ನಲ್ಲಿ ಉಗ್ರರ ಸಾವು, ಜಮ್ಮು ಕಾಶ್ಮೀರ ಪೊಲೀಸ್​ರಿಂದ ಎನ್​ಕೌಂಟರ್​
ಆವಂತಿಪೊರಾ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ

By

Published : May 31, 2022, 7:15 AM IST

Updated : May 31, 2022, 10:27 AM IST

ಜಮ್ಮು ಮತ್ತು ಕಾಶ್ಮೀರ: ಆವಂತಿಪುರ ಪ್ರದೇಶ ವ್ಯಾಪ್ತಿಯ ರಾಜ್‌ಪೊರಾ ಎಂಬಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿವೆ. ಉಗ್ರರಿಂದ 2 ಎಕೆ 47 ಬಂದೂಕು ವಶಕ್ಕೆ ಪಡೆಯಲಾಗಿದೆ. ಹತರಾದ ಉಗ್ರರನ್ನು ತ್ರಾಲ್ ಎಂಬಲ್ಲಿನ ಶಹೀದ್ ರಾಥರ್‌ ಮತ್ತು ಶೋಪಿಯಾನ್‌ನ ಉಮರ್ ಯೂಸುಫ್‌ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿ ಗಡಿ ದಾಟಿ ಉಗ್ರರು ಪರಾರಿ

ಭಯೋತ್ಪಾದಕ ಕೃತ್ಯಗಳನ್ನು ಹೊರತುಪಡಿಸಿ, ಶಹೀದ್‌ ರಾಥರ್‌ ಎಂಬಾತ ಈ ಹಿಂದೆ, ಅರಿಪಾಲ ನಿವಾಸಿ ಹಾಗು ಸರ್ಕಾರಿ ಉದ್ಯೋಗಿ ಶಕೀಲಾ ಹಾಗು ಲುರ್ಗಮ್ ತ್ರಾಲ್‌ನ ಸರ್ಕಾರಿ ಕಚೇರಿಯ ಜವಾನ ಜಾವಿದ್ ಅಹಮದ್‌ ಎಂಬಿಬ್ಬರನ್ನು ಹತ್ಯೆ ಮಾಡಿದ್ದ ಎಂದು ಕಾಶ್ಮೀರ ಐಜಿಪಿ ವಿಜಯ್‌ ಕುಮಾರ್ ಮಾಹಿತಿ ನೀಡಿದರು.

ಆವಂತಿಪೊರಾದ ರಾಜಪೊರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್‌ ಮುಂದುವರೆಸಿವೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Last Updated : May 31, 2022, 10:27 AM IST

ABOUT THE AUTHOR

...view details