ಕರ್ನಾಟಕ

karnataka

ETV Bharat / bharat

Srinagar Encounter: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ - ಜಮ್ಮು ಕಾಶ್ಮೀರ ಪೊಲೀಸರ ಟ್ವೀಟ್

ಇತ್ತೀಚೆಗೆ ಅನಂತ್‌ನಾಗ್‌ನ ಹಸನ್‌ಪೋರಾದಲ್ಲಿ ನಡೆದ ಹೆಡ್​ಕಾನ್ಸ್​ಟೇಬಲ್​​​ ಅಲಿ ಮೊಹಮ್ಮದ್ ಹತ್ಯೆಯಲ್ಲಿ ಭಾಗಿಯಾಗಿದ್ದ ಓರ್ವ ಸೇರಿದಂತೆ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಶ್ರೀನಗರದಲ್ಲಿ ಹೊಡೆದುರುಳಿಸಿವೆ.

Two terrorists neutralised in encounter at Srinagar's Zakura
Shrinagar Encounter: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

By

Published : Feb 5, 2022, 6:46 AM IST

ಶ್ರೀನಗರ(ಜಮ್ಮು ಕಾಶ್ಮೀರ): ಶ್ರೀನಗರದ ಜಕುರಾ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಎನ್‌ಕೌಂಟರ್ ನಡೆದ ನಂತರ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ - ಎ - ತೋಯ್ಬಾದ ಮತ್ತೊಂದು ಅಂಗವಾದ ಟಿಆರ್​ಎಫ್​​ನ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹತ್ಯೆಗೀಡಾದ ಭಯೋತ್ಪಾದಕರಲ್ಲಿ ಒಬ್ಬನನ್ನು ಇಖ್ಲಾಕ್ ಹಜಂ ಎಂದು ಗುರುತಿಸಲಾಗಿದ್ದು, ಇತ್ತೀಚೆಗೆ ಅನಂತ್‌ನಾಗ್‌ನ ಹಸನ್‌ಪೋರಾದಲ್ಲಿ ನಡೆದ ಹೆಡ್​ಕಾನ್ಸ್​ಟೇಬಲ್​​​ ಅಲಿ ಮೊಹಮ್ಮದ್ ಹತ್ಯೆಯಲ್ಲಿ ಇಖ್ಲಾಕ್ ಭಾಗಿಯಾಗಿದ್ದನು. ಕಾರ್ಯಾಚರಣೆಯ ಸ್ಥಳದಿಂದ ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಫೆಬ್ರವರಿ 2ರಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಮಿಶಿಜಿಪೋರಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಹೊಡೆದುರುಳಿಸಿದ್ದವು. ಈ ವೇಳೆ, ಭದ್ರತಾ ಪಡೆಯ ಓರ್ವ ಸಿಬ್ಬಂದಿಗೆ ಗಾಯವಾಗಿತ್ತು.

ಇದನ್ನೂ ಓದಿ:ಬಲೂಚಿಸ್ತಾನದಲ್ಲಿ ಮೂವರು ಉಗ್ರರ ಕೊಂದ ಪಾಕ್ ಸೇನೆ

ABOUT THE AUTHOR

...view details