ಕರ್ನಾಟಕ

karnataka

ETV Bharat / bharat

ಅಗ್ನಿವೀರ್​ ನೇಮಕಾತಿ ರ‍್ಯಾಲಿ ಮೇಲೆ ದಾಳಿಗೆ ಯೋಜಿಸಿದ್ದ ಇಬ್ಬರು ಭಯೋತ್ಪಾದಕರ ಹತ್ಯೆ - ಹಿರಿಯ ಪೊಲೀಸ್ ಅಧೀಕ್ಷಕ ರಯೀಸ್ ಮೊಹಮ್ಮದ್ ಭಟ್

10 ಹೈದರ್‌ಬೆಗ್ ಸೆಕ್ಟರ್ ಪ್ರಧಾನ ಕಚೇರಿಯಲ್ಲಿ ನಡೆಯುತ್ತಿರುವ ಅಗ್ನಿವೀರ್​ ಸೇನಾ ನೇಮಕಾತಿ ರ‍್ಯಾಲಿ ಮೇಲೆ ದಾಳಿ ಮಾಡುವ ಉದ್ದೇಶದಿಂದ ಹತ್ಯೆಯಾದ ಭಯೋತ್ಪಾದಕರು ಬಾರಾಮುಲ್ಲಾಕ್ಕೆ ಬಂದಿದ್ದರು

Senior Superintendent of Police Raees Mohammad Bhatt press conference
ಹಿರಿಯ ಪೊಲೀಸ್ ಅಧೀಕ್ಷಕ ರಯೀಸ್ ಮೊಹಮ್ಮದ್ ಭಟ್ ಸುದ್ದಿಗೋಷ್ಠಿ

By

Published : Sep 30, 2022, 7:36 PM IST

ಬಾರಾಮುಲ್ಲ(ಕಾಶ್ಮೀರ): ಪಟ್ಟನ್‌ನಲ್ಲಿ ಹತರಾದ ಭಯೋತ್ಪಾದಕರು ಬಾರಾಮುಲ್ಲಾದಲ್ಲಿ ಅಗ್ನಿವೀರ್ ನೇಮಕ ರ‍್ಯಾಲಿಯಲ್ಲಿ ದಾಳಿ ನಡೆಸಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಾರಾಮುಲ್ಲಾದ ಹಿರಿಯ ಪೊಲೀಸ್ ಅಧೀಕ್ಷಕ ರಯೀಸ್ ಮೊಹಮ್ಮದ್ ಭಟ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ 10 ಹೈದರ್‌ಬೆಗ್ ಸೆಕ್ಟರ್ ಪ್ರಧಾನ ಕಚೇರಿಯಲ್ಲಿ ನಡೆಯುತ್ತಿರುವ ಅಗ್ನಿವೀರ್​ ಸೇನಾ ನೇಮಕಾತಿ ರ‍್ಯಾಲಿ ಮೇಲೆ ದಾಳಿ ಮಾಡುವ ಉದ್ದೇಶದಿಂದ ಹತ್ಯೆಯಾದ ಭಯೋತ್ಪಾದಕರು ಬಾರಾಮುಲ್ಲಾಕ್ಕೆ ಬಂದಿದ್ದರು ಎಂದು ಹೇಳಿದರು.

ಹಿರಿಯ ಪೊಲೀಸ್ ಅಧೀಕ್ಷಕ ರಯೀಸ್ ಮೊಹಮ್ಮದ್ ಭಟ್ ಸುದ್ದಿಗೋಷ್ಠಿ

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟನ್‌ನ ಯಡಿಪೋರಾ ಗ್ರಾಮದಲ್ಲಿ ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಜಿಲ್ಲೆಯಲ್ಲಿ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿಯ ಮೇಲೆ ದಾಳಿ ನಡೆಸಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ದಿಷ್ಟ ಗುಪ್ತಚರ ಮಾಹಿತಿ ಆಧಾರದ ಮೇಲೆ ಗ್ರಾಮದಲ್ಲಿ ಜಂಟಿ ಕಾರ್ಯಾಚರಣೆ ಮತ್ತು ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಅಡಗಿದ್ದ ಸ್ಥಳೀಯ ಜೈಶ್​ ಭಯೋತ್ಪಾದಕರನ್ನು ಪತ್ತೆಹಚ್ಚಿ, ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು ಎಂದು ತಿಳಿಸಿದರು.

ಇದನ್ನೂ ಓದಿ:ಆಸ್ತಿ ಮುಟ್ಟುಗೋಲು: ಭಯೋತ್ಪಾದಕರ ವಿರುದ್ಧ ಕಾಶ್ಮೀರ ಪೊಲೀಸರ ಗದಾಪ್ರಹಾರ

ABOUT THE AUTHOR

...view details