ಕರ್ನಾಟಕ

karnataka

ETV Bharat / bharat

ಶರಣಾಗತಿಗೆ ಕರೆ ನೀಡಿದರೂ ಕೇಳದ ಭಯೋತ್ಪಾದಕರು : ಸದೆಬಡಿದ ಸೇನೆ - ಶ್ರೀನಗರ

ಭದ್ರತಾ ಪಡೆಗಳು ಭಯೋತ್ಪಾದಕರು ಇದ್ದ ಮನೆಯನ್ನು ಸುತ್ತುವರೆದು ಶರಣಾಗತಿಗಾಗಿ ಕರೆ ನೀಡಿದರೂ ಭಯೋತ್ಪಾದಕರು ಗುಂಡಿನ ದಾಳಿಗೆ ಮುಂದಾಗಿದ್ದಾರೆ. ಸತತ ನಾಲ್ಕು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರನ್ನು ಸೇನೆ ಸದೆಬಡಿದಿದೆ..

TWO TERRORIST ELIMINATED IN SOPORE, NORTH KASHMIR
ಶರಣಾಗತಿಗೆ ಕರೆ ನೀಡಿದರೂ ಕೇಳದ ಭಯೋತ್ಪಾದಕರು

By

Published : Jul 23, 2021, 8:21 PM IST

ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್‌ನ ವಾರ್ಪುರ ಗ್ರಾಮದ ಬಿಲಾಲಾಬಾದ್ ಮೊಹಲ್ಲಾದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಮಟ್ಟ ಹಾಕಲಾಗಿದೆ.

ಈ ಸಂಬಂಧ ನಿಖರ ಗುಪ್ತಚರ ಮಾಹಿತಿ ಸ್ವೀಕರಿಸಿ ಸಂಜೆ 4:15ರ ಸುಮಾರಿಗೆ ಸೊಪೋರ್ ಮೂಲದ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್, ಜೆಕೆಪಿ ಮತ್ತು ಸಿಆರ್​ಪಿಎಫ್ ಜಂಟಿ ತಂಡವು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ಪ್ರಾರಂಭಿಸಿತು.

ಭದ್ರತಾ ಪಡೆಗಳು ಭಯೋತ್ಪಾದಕರು ಇದ್ದ ಮನೆಯನ್ನು ಸುತ್ತುವರೆದು ಶರಣಾಗತಿಗಾಗಿ ಕರೆ ನೀಡಿದರೂ ಭಯೋತ್ಪಾದಕರು ಗುಂಡಿನ ದಾಳಿಗೆ ಮುಂದಾಗಿದ್ದಾರೆ. ಸತತ ನಾಲ್ಕು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರನ್ನು ಸೇನೆ ಸದೆಬಡಿದಿದೆ.

ಈ ಗುಂಡಿನ ದಾಳಿಯಲ್ಲಿ ಹತ್ಯೆಗೀಡಾದ ಭಯೋತ್ಪಾದಕರು ಲಷ್ಕರ್-ಎ-ತೈಬಾಗೆ ಸೇರಿದವರಾಗಿದ್ದಾರೆ. 2021ರ ಜೂನ್ 12ರಂದು ಸೊಪೋರ್‌ನಲ್ಲಿ ನಾಲ್ಕು ಮುಗ್ಧ ನಾಗರಿಕರು ಮತ್ತು ಪೊಲೀಸರನ್ನು ಕೊಂದದ್ದು ಸೇರಿದಂತೆ ನಾಗರಿಕರ ಮೇಲೆ ಹಲವಾರು ದಾಳಿಗಳಲ್ಲಿ ಇವರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ABOUT THE AUTHOR

...view details