ಕರ್ನಾಟಕ

karnataka

ETV Bharat / bharat

ಆನ್​ಲೈನ್ ರಮ್ಮಿ ಆಟದ ಹುಚ್ಚು: ಹಣ ಕಳೆದುಕೊಂಡು ಇಬ್ಬರು ಆತ್ಮಹತ್ಯೆ, ಹೈಕೋರ್ಟ್​ ಮೆಟ್ಟಿಲೇರಿದ ಪ್ರಕರಣ! - ತಮಿಳುನಾಡಿನಲ್ಲಿ ಆನ್​ಲೈನ್ ಜೂಜಾಟ ರಮ್ಮಿ

ತಮಿಳುನಾಡಿನಲ್ಲಿ ಆನ್​ಲೈನ್ ಜೂಜಾಟ ರಮ್ಮಿ ಚಟಕ್ಕೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಇದರ ಮಧ್ಯೆ ಪ್ರಕರಣದ ವಿಚಾರಣೆ ಮದ್ರಾಸ್ ಹೈಕೋರ್ಟ್​ನಲ್ಲಿ ನಡೆಯುತ್ತಿದೆ.

Two suicide in a single day at Coimbator
Two suicide in a single day at Coimbator

By

Published : Nov 3, 2020, 6:10 PM IST

ಕೊಯಮತ್ತೂರು:ಆನ್​ಲೈನ್​ ರಮ್ಮಿ ಆಟದ ಹುಚ್ಚಿನಿಂದಾಗಿ ಹಣ ಕಳೆದುಕೊಂಡು ತೊಂದರೆಗೀಡಾಗಿರುವ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ಜಯಚಂದ್ರನ್​(32) ಕೊಯಮತ್ತೂರು ಜಿಲ್ಲೆಯ ಮಚಂಬಲೈಯಂ ಮೂಲದವನಾಗಿದ್ದು, ಸಿಎನ್​ಸಿ ಆಪರೇಟರ್​ ಆಗಿ ಸೇವೆ ಸಲ್ಲಿಸುತ್ತಿದ್ದ. ಕಳೆದ ಕೆಲ ತಿಂಗಳಿಂದ ಸಾಲದ ಸುಳಿಗೆ ಸಿಲುಕಿದ್ದ ಆತ ಆನ್​ಲೈನ್​ ರಮ್ಮಿ ಆಟದ ವ್ಯಸನಿಯಾಗಿದ್ದಾನೆ. ರಮ್ಮಿ ಆಡಲು ಆಧಾರ್​ ಕಾರ್ಡ್​ ಹಾಗೂ ಬ್ಯಾಂಕ್​ ಪಾಸ್​ಬುಕ್​ ಇತ್ಯಾದಿ ಬಳಕೆ ಮಾಡಿ ಹೊರಗಿನಿಂದ ಹಣ ಎರವಲು ಪಡೆದುಕೊಂಡಿದ್ದಾನೆ. ಈ ವೇಳೆ ಸಂಪೂರ್ಣ ಹಣ ರಮ್ಮಿ ಆಡಿ ಕಳೆದುಕೊಂಡಿದ್ದು, ಅದರಿಂದ ತೊಂದರೆಗೊಳಗಾಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮದ್ರಾಸ್​ ಹೈಕೋರ್ಟ್​​

ಇಂತಹ ಮತ್ತೊಂದು ಘಟನೆ ಕೊಯಮತ್ತೂರಿನ ತೋಂಡಮುತೂರು ಪ್ರದೇಶದಲ್ಲಿ ನಡೆದಿದೆ. ಕಂಪ್ಯೂಟರ್ ಆಪರೇಟರ್​ ಆಗಿ ಕೆಲಸ ಮಾಡ್ತಿದ್ದ ವ್ಯಕ್ತಿಯೋರ್ವ ಕಳೆದ ಆರು ತಿಂಗಳಿಂದ ಆನ್​ಲೈನ್​ ರಮ್ಮಿ ಆಟದ ವ್ಯಸನಿಯಾಗಿದ್ದ. ಈತನ ಪತ್ನಿ ಜಗಳ ಮಾಡಿ ಕಳೆದ 15 ದಿನಗಳ ಹಿಂದೆ ತಾಯಿ ಮನೆಗೆ ಹೋಗಿದ್ದಳು. ಈ ವೇಳೆ ಸ್ನೇಹಿತನಿಗೆ ನೀಡಬೇಕಾಗಿದ್ದ 50 ಸಾವಿರ ರೂ.ಗಳಲ್ಲಿ 20 ಸಾವಿರ ರೂ. ರಮ್ಮಿ ಆಡಿ ಕಳೆದುಕೊಂಡಿದ್ದಾನೆ. ಇದರಿಂದ ಹತಾಶೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಮ್ಮಿ ನಿಷೇಧ ವಿಚಾರಣೆ ನವೆಂಬರ್​ 19ಕ್ಕೆ ಮುಂದೂಡಿಕೆ

ತಮಿಳುನಾಡಿನಲ್ಲಿ ಆನ್​ಲೈನ್​ ರಮ್ಮಿ ಗೇಮ್​ ಬ್ಯಾನ್​ ಮಾಡುವಂತೆ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ಅದರ ವಿಚಾರಣೆ ನವೆಂಬರ್​ 19ಕ್ಕೆ ಮುಂದೂಡಿಕೆಯಾಗಿದೆ. ಮದ್ರಾಸ್​ ಹೈಕೋರ್ಟ್​​ನಲ್ಲಿ ಇದರ ವಿಚಾರಣೆ ನಡೆಸಲಾಗುತ್ತಿದ್ದು, ಎಲ್ಲಾ ಹಣ ಎಲ್ಲಿಗೆ ಹೋಗುತ್ತಿದೆ, ಯಾರ ಖಾತೆಗೆ ಹೋಗುತ್ತಿದೆ ಎಂದು ತಿಳಿದುಕೊಳ್ಳಲು ಬಯಸುತ್ತೇವೆ. ಹೀಗಾಗಿ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. ಜತೆಗೆ ಮುಂದಿನ 10 ದಿನಗಳಲ್ಲಿ ಆನ್​ಲೈನ್ ಜೂಜಾಟ ನಿಷೇಧಿಸಲು ತಮಿಳುನಾಡು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಕೋರ್ಟ್​ ತಿಳಿಸಿದೆ. ತೆಲಂಗಾಣದಲ್ಲಿ ಈಗಾಗಲೇ ಆನ್​ಲೈನ್​ ಜೂಜಾಟ ನಿಷೇಧ ಮಾಡಲಾಗಿದೆ.

ABOUT THE AUTHOR

...view details