ಕರ್ನಾಟಕ

karnataka

ETV Bharat / bharat

ಪರೀಕ್ಷೆಯಲ್ಲಿ ಕಡಿಮೆ ಅಂಕ: 5 ಗಂಟೆಯೊಳಗೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ! - ಜೈಪುರ

students commit suicide in Kota: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಮನನೊಂದು ಒಂದೇ ದಿನ ಐದು ಗಂಟೆಗಳ ಅವಧಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

Representative image
ಪ್ರಾತಿನಿಧಿಕ ಚಿತ್ರ

By ETV Bharat Karnataka Team

Published : Aug 28, 2023, 10:39 AM IST

ಜೈಪುರ(ರಾಜಸ್ಥಾನ): ಕೋಟಾದಲ್ಲಿ ಒಂದೇ ದಿನ ಐದು ಗಂಟೆಗಳ ಅವಧಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಎಸ್​ಪಿ ಭಗವತ್ ಸಿಂಗ್ ಹಿಂಗದ್ ತಿಳಿಸಿದ್ದಾರೆ. ನೀಟ್​ಗೆ ಅಧ್ಯಯನ ನಡೆಸುತ್ತಿದ್ದ ಮಹಾರಾಷ್ಟ್ರದ ನಿವಾಸಿ ಆವಿಷ್ಕಾರ್ ಸಂಭಾಜಿ ಕಸ್ಲೆ(16) ಹಾಗೂ ಬಿಹಾರ ಮೂಲದ ಆದರ್ಶ್(18) ಆತ್ಮಹತ್ಯೆ ಮಾಡಿಕೊಂಡವರು.

ಮೊದಲ ಪ್ರಕರಣ: ಭಾನುವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಮಹಾರಾಷ್ಟ್ರದ ಲಾತೂರ್ ನಿವಾಸಿ ಆವಿಷ್ಕಾರ್ ಸಂಭಾಜಿ ಕಸ್ಲೆ ಕೋಟಾದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಸ್ಲೆ ಕಳೆದ ಮೂರು ವರ್ಷಗಳಿಂದ ನಗರದ ತಲವಂಡಿ ಪ್ರದೇಶದಲ್ಲಿ ನೆಲೆಸಿದ್ದು, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET) ತಯಾರಿ ನಡೆಸುತ್ತಿದ್ದರು. ಪರೀಕ್ಷೆಗೆ ಹಾಜರಾಗಲು ಕೋಚಿಂಗ್ ಸೆಂಟರ್‌ಗೆ ಹಿಂದಿನ ದಿನ ಬಂದಿದ್ದರು ಎಂದು ತಿಳಿದು ಬಂದಿದೆ.

2ನೇ ಪ್ರಕರಣೆ:ಬಿಹಾರ ಮೂಲದ ಆದರ್ಶ್ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನೀಟ್‌ಗೆ ತಯಾರಿ ನಡೆಸುತ್ತಿದ್ದ ಆದರ್ಶ್ ಕಳೆದ ನಾಲ್ಕು ತಿಂಗಳಿನಿಂದ ತನ್ನ ಸಹೋದರ ಹಾಗೂ ಸಹೋದರಿಯೊಂದಿಗೆ ಕೋಟಾದ ಕುನ್ಹಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ. ಭಾನುವಾರ ಪರೀಕ್ಷೆ ಬರೆದು ಮನೆಗೆ ಬಂದ ಆದರ್ಶ್ ನೇರವಾಗಿ ತನ್ನ ಕೋಣೆಗೆ ಹೋಗಿದ್ದ. ಸಂಜೆ 7 ಗಂಟೆ ಸುಮಾರಿಗೆ ಅವನ ಸಹೋದರಿ ಊಟಕ್ಕೆ ಕರೆಯಲು ಬಂದಾಗ ಅವನು ಪ್ರತಿಕ್ರಿಯಿಸಲಿಲ್ಲ.

ತಕ್ಷಣ ಸಹೋದರಿ ಹಾಗೂ ಇನ್ನೊಬ್ಬ ಸಹೋದರ ಸೇರಿಕೊಂಡರು ಬಾಗಿಲು ಒಡೆದು ನೋಡಿದಾಗ ಆದರ್ಶ್ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಆತ ಸಾವನಪ್ಪಿದ್ದ ಎಂದು ತಿಳಿದು ಬಂದಿದೆ. ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಪರೀಕ್ಷೆಗಳಲ್ಲಿ ಆದರ್ಶ್ ನಿರಂತರವಾಗಿ ಕಡಿಮೆ ಅಂಕಗಳನ್ನು ಪಡೆಯುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಅವರ ಕೊಠಡಿ ಪರಿಶೀಲಿಸಲಾಗುವುದು ಎಂದು ಎಎಸ್​ಪಿ ತಿಳಿಸಿದ್ದಾರೆ.

ಭಾನುವಾರ ಪರೀಕ್ಷೆ ನಡೆಸಬಾರದು ಎಂದು ಕೋಚಿಂಗ್ ಆಪರೇಟರ್‌ಗಳು ಮತ್ತು ಸೆಂಟರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಆಗಸ್ಟ್ 12 ರಂದು ಕೋಟಾ ಜಿಲ್ಲಾಧಿಕಾರಿ ಒ.ಪಿ ಬಂಕರ್ ಮಾರ್ಗಸೂಚಿ ಹೊರಡಿಸಿದ್ದರು. ಇದರ ಹೊರತಾಗಿಯೂ ಭಾನುವಾರ ಪರೀಕ್ಷೆ ನಡದ ಬಳಿಕ ಎರಡು ದುರಂತ ಘಟನೆಗಳು ಸಂಭವಿಸಿವೆ. ಹಾಗಾಗಿ ಜಿಲ್ಲಾಧಿಕಾರಿ ಬಂಕರ್ ಭಾನುವಾರ ರಾತ್ರಿ ಮತ್ತೆ ಹೊಸ ಆದೇಶಗಳನ್ನು ಹೊರಡಿಸಿದ್ದಾರೆ. ಅದರ ಅಡಿಯಲ್ಲಿ ಯಾವುದೇ ಕೋಚಿಂಗ್ ಸಂಸ್ಥೆ ಎರಡು ತಿಂಗಳವರೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ಅನುಮತಿಸುವುದಿಲ್ಲ ಎಂದು ಸೂಚಿಸಿದ್ದಾರೆ.

ನಾಲ್ಕು ಮಂದಿ ಆತ್ಮಹತ್ಯೆ:ಕೋಟಾದಲ್ಲಿ ಈ ತಿಂಗಳೊಂದರಲ್ಲೇ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಬಿಹಾರದ ನಿವಾಸಿ ವಾಲ್ಮೀಕಿ ಪ್ರಸಾದ್ ಜಂಗಿದ್ (18), ಉತ್ತರ ಪ್ರದೇಶದ ಅಜಂಗಢ ಮೂಲದ ಮನೀಶ್ ಪ್ರಜಾಪತಿ (17), ಬಿಹಾರದ ಮೋತಿಹಾರಿ ನಿವಾಸಿ ಭಾರ್ಗವ್ ಮಿಶ್ರಾ (17) ಹಾಗೂ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಮಂಜೋತ್ ಛಾಬ್ರಾ (18) ಎಂದು ಗುರುತಿಸಲಾಗಿದೆ. (ಐಎಎನ್‌ಎಸ್)

ಇದನ್ನೂ ಓದಿ:ತೆಲಂಗಾಣ: ಇಂಟರ್​ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ

ABOUT THE AUTHOR

...view details