ಕರ್ನಾಟಕ

karnataka

ಲೇವಾದೇವಿದಾರರ ಕಿರುಕುಳ: ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

By

Published : Jan 29, 2023, 11:10 PM IST

ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯಲ್ಲಿ ಲೇವಾದೇವಿದಾರರ ಕಿರುಕುಳದಿಂದ ಬೇಸತ್ತು ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

two-sons-along-with-their-father-committed-suicide-in-nashik
ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ನಾಸಿಕ್ (ಮಹಾರಾಷ್ಟ್ರ):ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯಲ್ಲಿ ನಡೆದಿದೆ. ದೀಪಕ್ ಶಿರೋಡ್ (55) ಮತ್ತು ಮಕ್ಕಳಾದ ಪ್ರಸಾದ್ ಶಿರೋಡ್ (25), ರಾಕೇಶ್ ಶಿರೋಡ್ (23) ಎಂಬುವವರೇ ಆತ್ಮಹತ್ಯೆಗೆ ಶರಣಾದವರು ಎಂದು ಗುರುತಿಸಲಾಗಿದೆ. ಲೇವಾದೇವಿದಾರರ ಕಿರುಕುಳದಿಂದ ಬೇಸತ್ತು ಈ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಲ್ಲಿನ ಸಾತ್ಪುರ ಪ್ರದೇಶದ ರಾಧಾಕೃಷ್ಣ ನಗರದಲ್ಲಿ ವಾಸವಾಗಿದ್ದ ದೀಪಕ್ ಶಿರೋಡ್ ಮತ್ತು ಪುತ್ರರುಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಮನೆಯಲ್ಲಿ ಮೂವರು ಕೂಡ ಪ್ರತ್ಯೇಕವಾದ ಮೂರು ಕೊಠಡಿಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಶಿರೋಡ್ ಕುಟುಂಬವು ಮೂಲತಃ ದೇವಳ ತಾಲೂಕಿನ ಉಮ್ರಾಣೆ ಗ್ರಾಮದವರಾಗಿದ್ದು, ಹತ್ತು ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ನಾಸಿಕ್​ಗೆ ಬಂದು ನೆಲೆಸಿದ್ದರು.

ಅಶೋಕನಗರ ಬಸ್ ನಿಲ್ದಾಣದ ಬಳಿ ದೀಪಕ್ ಶಿರೋಡೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದರು. ಪುತ್ರರಾದ ಪ್ರಸಾದ್ ಶಿರೋಡ್, ರಾಕೇಶ್ ಶಿರೋಡ್ ಸಹ ನಾಲ್ಕು ಚಕ್ರದ ವಾಹನಗಳಲ್ಲಿ ಹಣ್ಣು ಮಾರುವ ವ್ಯಾಪಾರ ಮಾಡುತ್ತಿದ್ದರು. ಮೂವರು ಕೂಡ ಆತ್ಮಹತ್ಯೆಗೂ ಮುನ್ನ ಡೆತ್​ನೋಟ್​ ಬರೆದಿಟ್ಟಿದ್ದು, ಅದು ಪತ್ತೆಯಾಗಿದೆ. ಅದರಲ್ಲಿ ಲೇವಾದೇವಿದಾರರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆಯಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಆಯುಕ್ತ ಅಂಕುಶ ಶಿಂಧೆ ತಿಳಿಸಿದ್ದಾರೆ.

ಅಲ್ಲದೇ, ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಶಿರೋಡ್ ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಹೀಗಾಗಿ ಇಡೀ ಕುಟುಂಬವು ಕಳೆದ ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿತ್ತು. ಹೀಗಾಗಿ ತಂದೆ ಹಾಗೂ ಇಬ್ಬರು ಮಕ್ಕಳು ಈ ಕಠಿಣ ನಿರ್ಧಾರಕ್ಕೆ ಬಂದಿರಬೇಕೆಂದ ಮಾತುಗಳು ಕುಟುಂಬದ ವಲಯದಲ್ಲಿ ಕೇಳಿ ಬರುತ್ತಿವೆ.

ಇದನ್ನೂ ಓದಿ:ಮಹಿಳಾ ಸಹೋದ್ಯೋಗಿಯ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪೊಲೀಸ್​ ಕಾನ್ಸ್​ಟೇಬಲ್

ABOUT THE AUTHOR

...view details