ಕರ್ನಾಟಕ

karnataka

ETV Bharat / bharat

ಉಗ್ರರ ಪತ್ತೆಗೆ ಮುಂದುವರಿದ ಕಾರ್ಯಾಚರಣೆ : ಭಾರತೀಯ ಸೇನೆಯ ಇಬ್ಬರು ಹುತಾತ್ಮ - ಪೂಂಚ್

14 ಅಕ್ಟೋಬರ್ 2021ರಂದು ಭಯೋತ್ಪಾದಕರೊಂದಿಗಿನ ಭೀಕರ ಗುಂಡಿನ ಚಕಮಕಿಯ ನಂತರ, ಸುಬೇದಾರ್ ಅಜಯ್ ಸಿಂಗ್ ಮತ್ತು ನಾಯಕ್ ಹರೇಂದ್ರ ಸಿಂಗ್ ಅವರು ಸರಿಯಾಗಿ ಸಂಪರ್ಕಕ್ಕೆ ಸಿಗದೇ ಅವರೊಂದಿಗಿನ ಸಂವಹನ ಕಡಿತಗೊಂಡಿತು..

two soldiers martyred  in counter-terrorist-operations
ಹುತಾತ್ಮ

By

Published : Oct 16, 2021, 10:24 PM IST

ಮೆಂಧರ್ :ಜಮ್ಮು-ಕಾಶ್ಮೀರ ಪೂಂಚ್ ಜಿಲ್ಲೆಯ ಮೆಂಧರ್ ಉಪ ವಿಭಾಗದ ನರಖಾಸ್ ಅರಣ್ಯದ ಪ್ರದೇಶದಲ್ಲಿ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ನಡೆಸುತ್ತಿರುವ ಉಗ್ರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಇಬ್ಬರು ಹುತಾತ್ಮರಾಗಿದ್ದಾರೆ.

ಸೇನೆಯ ಸುಬೇದಾರ್ ಅಜಯ್ ಸಿಂಗ್ ಮತ್ತು ನಾಯಕ್ ಹರೇಂದ್ರ ಸಿಂಗ್ ಸಾವನ್ನಪ್ಪಿದ್ದಾರೆ. ಇವರಿಬ್ಬರು ಅರಣ್ಯ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಲು ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯ ಭಾಗವಾಗಿದ್ದರು.

14 ಅಕ್ಟೋಬರ್ 2021ರಂದು ಭಯೋತ್ಪಾದಕರೊಂದಿಗಿನ ಭೀಕರ ಗುಂಡಿನ ಚಕಮಕಿಯ ನಂತರ, ಸುಬೇದಾರ್ ಅಜಯ್ ಸಿಂಗ್ ಮತ್ತು ನಾಯಕ್ ಹರೇಂದ್ರ ಸಿಂಗ್ ಅವರು ಸರಿಯಾಗಿ ಸಂಪರ್ಕಕ್ಕೆ ಸಿಗದೇ ಅವರೊಂದಿಗಿನ ಸಂವಹನ ಕಡಿತಗೊಂಡಿತು.

ಆದರೆ, ಭಯೋತ್ಪಾದಕರನ್ನು ಮಟ್ಟ ಹಾಕಲು ಕಾರ್ಯಾಚರಣೆಗಳು ಮುಂದುವರಿದಿದ್ದವು. ಈ ಉಗ್ರರ ವಿರುದ್ಧ ಹೋರಾಟದಲ್ಲಿ ಸುಬೇದಾರ್ ಅಜಯ್ ಸಿಂಗ್ ಮತ್ತು ನಾಯಕ್ ಹರೇಂದ್ರ ಸಿಂಗ್ ಹುತಾತ್ಮರಾಗಿದ್ದು, ಅವರ ಶವಗಳು ಇಂದು ಸಂಜೆ ಪತ್ತೆಯಾಗಿವೆ.

ABOUT THE AUTHOR

...view details