ರಾಂಚಿ (ಜಾರ್ಖಂಡ್) : ಹೃದಯಾಘಾತ ಸಮಸ್ಯೆ ಈಗ ಚಿಕ್ಕಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ದಿಢೀರ್ ಬಂದರೆಗುತ್ತಿದೆ. ಈ ತೊಂದರೆ ಕಾಣಿಸಿಕೊಂಡರೆ ಕೆಲವೇ ಕ್ಷಣಗಳಲ್ಲಿ ಉಸಿರು ನಿಲ್ಲುತ್ತೆ, ಇನ್ನೂ ಕೆಲವರ ಪ್ರಾಣವೇ ಹಾರಿಹೋಗುತ್ತೆ. ಇತ್ತೀಚೆಗೆ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇಂತಹದ್ದೇ ಪ್ರಕರಣ ಜಾರ್ಖಂಡ್ನಲ್ಲಿ ನಡೆದಿದ್ದು, ಇಬ್ಬರು ಯೋಧರು ಮೃತಪಟ್ಟಿದ್ದಾರೆ.
ಜಾರ್ಖಂಡ್ನಲ್ಲಿ ಇಬ್ಬರು ಯೋಧರು ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ ಇಬ್ಬರು ಯೋಧರು ಹಠಾತ್ ಸಾವಿಗೀಡಾಗಿದ್ದಾರೆ. ಒಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರೆ, ಇನ್ನೊಬ್ಬರು ಕುಡಿತಕ್ಕೆ ದಾಸರಾಗಿದ್ದರು ಎಂದು ಹೇಳಲಾಗಿದೆ. ಇಬ್ಬರಿಗೂ ನಿನ್ನೆ ರಾತ್ರಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಇಬ್ಬರೂ ಯೋಧರು ಬಿಹಾರ ಮೂಲದವರಾಗಿದ್ದಾರೆ. ಮೃತರು ಜಾರ್ಖಂಡ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತ ಯೋಧರನ್ನು ಪ್ರಕಾಶ್ ಕಿರಣ್, ಜನಾರ್ದನ್ ಸಿಂಗ್ ಎಂದು ಗುರುತಿಸಲಾಗಿದೆ.
ಯೋಧ ಜನಾರ್ದನ್ ಸಿಂಗ್ ಅವರು ಕುಡಿತದ ಚಟ ಹೊಂದಿದ್ದರು. ಸೋಮವಾರ ರಾತ್ರಿ ಅವರ ತೀವ್ರ ಆರೋಗ್ಯ ಹದಗೆಟ್ಟಿದ್ದು, ಸಹ ಸೈನಿಕರು ಮತ್ತು ಕುಟುಂಬ ಸದಸ್ಯರು ಅವರನ್ನು ಚಿಕಿತ್ಸೆಗಾಗಿ ಎಂಎಂಸಿಎಚ್‌ಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.