ಕರ್ನಾಟಕ

karnataka

ETV Bharat / bharat

ಲಖನೌದಲ್ಲಿ ಸೇನಾಧಿಕಾರಿಯ ಹತ್ಯೆ, ಸಹೋದ್ಯೋಗಿಯಿಂದಲೇ ಕೃತ್ಯ: ಕಾರಣವೇನು?

ಸೇನೆಯ ಮೆಸ್​ ಜವಾಬ್ದಾರಿ ವಹಿಸಿಕೊಳ್ಳುವ ಬಗ್ಗೆ ಸೇನೆಯ ಜ್ಯೂನಿಯರ್​ ಕಮಿಷನ್ಡ್​ ಆಫೀಸರ್​​ಗಳ ಮಧ್ಯೆ ಆರೋಪ, ಪ್ರತ್ಯಾರೋಪಗಳು ನಡೆದಿವೆ. ಮಾತು ವಿಕೋಪಕ್ಕೆ ತಿರುಗಿ ಗೋರ್ಖಾ ರೆಜಿಮೆಂಟ್​​ನ ಸುಬೇದಾರ್ ಸಿಂಪಾ ಶೆರ್ಪಾ ಹಾಗೂ ಸುಬೇದಾರ್​ ರಮೇಶ್​​ ಕುಮಾರ್ ಪರಸ್ಪರ ಚಾಕುವಿನಿಂದ ಹಲ್ಲೆ ನಡೆಸಿಕೊಂಡಿದ್ದಾರೆ. ಈ ವೇಳೆ ಸುಬೇದಾರ್​ ಸಿಂಪಾ ಶೆರ್ಪಾ ಮೃತಪಟ್ಟಿದ್ದು, ಸುಬೇದಾರ್​ ರಮೇಶ್​​ ಸ್ಥಿತಿ ಗಂಭೀರವಾಗಿದೆ.

ಮೆಸ್​​ನಲ್ಲಿನ ಅವ್ಯವಸ್ಥೆ
ಮೆಸ್​​ನಲ್ಲಿನ ಅವ್ಯವಸ್ಥೆ

By

Published : Feb 27, 2021, 1:37 PM IST

ಉತ್ತರಪ್ರದೇಶ:ಸೇನೆಗೆ ಸೇರಿದ ಮೆಸ್ ಉಸ್ತುವಾರಿ ವಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಗೋರ್ಖಾ ರೆಜಿಮೆಂಟ್​ನ ಇಬ್ಬರು ಸೇನಾ ಅಧಿಕಾರಿಗಳ ಮಧ್ಯೆ ನಡೆದ ಆರೋಪ, ಪ್ರತ್ಯಾರೋಪ ವಿಕೋಪಕ್ಕೆ ತಿರುಗಿ ಒಬ್ಬರ ಕೊಲೆಯಲ್ಲಿ ಅಂತ್ಯಗೊಂಡಿದೆ.

ಮೆಸ್​​ ಜವಾಬ್ದಾರಿ ವಹಿಸಿಕೊಳ್ಳುವ ಬಗ್ಗೆ ಇಬ್ಬರ ಮಧ್ಯೆ ಆರೋಪ, ಪ್ರತ್ಯಾರೋಪಗಳು ನಡೆದಿವೆ. ಮಾತು ವಿಕೋಪಕ್ಕೆ ತಿರುಗಿ ಪಶ್ಚಿಮ ಬಂಗಾಳ ನಿವಾಸಿ ಸುಬೇದಾರ್ ಸಿಂಪಾ ಶೆರ್ಪಾ ಹಾಗೂ ಸುಬೇದಾರ್​ ರಮೇಶ್​​ ಕುಮಾರ್ ಪರಸ್ಪರ ಚಾಕುವಿನಿಂದ ಹಲ್ಲೆ ನಡೆಸಿಕೊಂಡಿದ್ದಾರೆ. ಈ ವೇಳೆ ಸಿಂಪಾ ಶೆರ್ಪಾ ಮೃತಪಟ್ಟಿದ್ದು, ರಮೇಶ್​​ ಸ್ಥಿತಿ ಗಂಭೀರವಾಗಿದೆ. ಗಾಯಾಳುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಸೇನೆಯಲ್ಲಿರುವ ಯಾವುದೇ ಅಧಿಕಾರಿ ಪ್ರತಿಕ್ರಿಯೆ ನೀಡಲು ಮುಂದಾಗುತ್ತಿಲ್ಲ. ಆದರೆ, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ತೂತುಕುಡಿಯಲ್ಲಿ ರಾಹುಲ್ ಗಾಂಧಿ ಭರ್ಜರಿ ರೋಡ್​ ಶೋ - ವಿಡಿಯೋ

ಸೇನಾ ಮೇಸ್​​ನಲ್ಲೇ ಸಿಂಪಾ ಶೆರ್ಪಾ ಮೃತದೇಹ ಪತ್ತೆಯಾಗಿದೆ, ಇನ್ನೂರು ಮೀಟರ್ ದೂರದಲ್ಲಿ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಗಾಯಗೊಂಡಿರುವ ರಮೇಶ್ ಕುಮಾರ್​​ ಬಿದ್ದಿದ್ದರು ಎಂದು ಡಿಸಿಪಿ ಸಂಜೀವ್ ಸುಮನ್ ತಿಳಿಸಿದ್ದಾರೆ. ಸಿಂಪಾ ಶೆರ್ಪಾ ಮತ್ತು ರಮೇಶ್​ ಕುಮಾರ್​ ಇಬ್ಬರೂ ಗೋರ್ಖಾ ರೆಜಿಮೆಂಟ್​​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜ್ಯೂನಿಯರ್​​ ಕಮಿಷನ್ಡ್​ ಆಫೀಸರ್​​ಗಳಾಗಿದ್ದಾರೆ.

ABOUT THE AUTHOR

...view details