ಶಿಮ್ಲಾ(ಉತ್ತರಾಖಂಡ): ಸಾಮಾಜಿಕ ಜಾಲತಾಣ, ಮಿಸ್ ಕಾಲ್ಡ್ ಮೂಲಕ ಪರಿಚಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಹಾಗೂ ಪ್ರೇಮದ ಬಲೆಗೆ ಬಿದ್ದಿರುವ ಅನೇಕ ಘಟನೆಗಳು ನಮ್ಮ ಮುಂದೆ ನಡೆದಿವೆ. ಇದರ ಮಧ್ಯೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಆದರೆ, ಇದು ಮಾತ್ರ ವಿಭಿನ್ನವಾಗಿ ನಡೆದಿರುವ ಘಟನೆಯಾಗಿದೆ.
ಉತ್ತರಾಖಂಡದ ಚಮೋಲಿಯಲ್ಲಿ ನಡೆದಿರುವ ಘಟನೆ ವಿಚಿತ್ರ ಘಟನೆ ಇದಾಗಿದೆ. ಹಿಮಾಚಲ ಪ್ರದೇಶದ ಕಾಂಗ್ರಾದಿಂದ ಇಬ್ಬರು ಸಹೋದರಿಯರು ಪಬ್ಜೀ ಸ್ನೇಹಿತನೊಂದಿಗೆ ಲವ್ನಲ್ಲಿ ಬಿದ್ದು, ಆತನೊಂದಿಗೆ ಮದುವೆ ಮಾಡಿಕೊಳ್ಳಲು ಸುಮಾರು 700 ಕಿ.ಮೀಟರ್ ಬಂದಿದ್ದಾರೆ. ಉತ್ತರಾಖಂಡದ ಥರಲಿ ತಲುಪಿರುವ ಅವರು ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ ಹುಡುಗ ಅಪ್ರಾಪ್ತ ಎಂಬುದು ಗೊತ್ತಾಗುತ್ತಿದ್ದಂತೆ ಅವರ ಹೃದಯ ಒಡೆದು ಹೋಗಿದೆ.
ಲವರ್ ಭೇಟಿಗಾಗಿ ಹಿಮಾಚಲ ಪ್ರದೇಶದಿಂದ ಉತ್ತರಾಖಂಡ್ಗೆ ಬಂದ ಸಹೋದರಿಯರು ಪಬ್ಜೀ ಆಡುವಾಗ ಹಿಮಾಚಲ ಪ್ರದೇಶದ ಕಾಂಗ್ರಾದ ಇಬ್ಬರು ಯುವತಿಯರು ಹಾಗೂ ಉತ್ತರಾಖಂಡ್ದ ಯುವಕನ ನಡುವೆ ಪ್ರೇಮಾಂಕುರವಾಗಿದೆ. ಈ ವೇಳೆ, ಆತನೊಂದಿಗೆ ಸಪ್ತಪದಿ ತುಳಿಯಲು ನಿರ್ಧಾರ ಮಾಡಿ, ಅಲ್ಲಿಂದ ಬಂದಿದ್ದಾರೆ.
ಇದನ್ನೂ ಓದಿರಿ: ಡ್ರೈವರ್ ಇಲ್ಲದೇ ಚಲಿಸಿದ ಬೈಕ್.. ಸಿಸಿಟಿವಿಯಲ್ಲಿ ಸೆರೆಯಾಯ್ತು ವಿಡಿಯೋ!
ಸಹೋದರಿಯರಿಬ್ಬರು ನಾಪತ್ತೆ ಆಗಿರುವ ಬಗ್ಗೆ ಪೋಷಕರು ಕಾಂಗ್ರಾ ಜಿಲ್ಲೆಯ ಬೈಜನಾಥ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ವೇಳೆ, ಹುಡುಗಿಯರ ಮೊಬೈಲ್ ಟ್ರ್ಯಾಕ್ ಮಾಡಿದಾಗ ಉತ್ತರಾಖಂಡದಲ್ಲಿರುವುದು ಗೊತ್ತಾಗಿದೆ. ಅಲ್ಲಿನ ಪೊಲೀಸರ ಸಹಾಯದಿಂದ ಇವರ ರಕ್ಷಣೆ ಮಾಡಲಾಗಿದ್ದು, ಮರಳಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಇಬ್ಬರು ಸಹೋದರಿಯರು ಮನೆಯಿಂದ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ನಗದು ಹಾಗೂ ಆಭರಣ ತೆಗೆದುಕೊಂಡು ತೆರಳಿದ್ದರು.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸರು, ಪಬ್ಜೀ ಆಟವಾಡುತ್ತಿದ್ದ ಸಂದರ್ಭದಲ್ಲಿ ಇವರು ಪರಸ್ಪರ ಪರಿಚಯವಾಗಿದ್ದಾರೆ. ಈ ವೇಳೆ, ಮೊಬೈಲ್ ನಂಬರ್ ಬದಲಾವಣೆ ಮಾಡಿಕೊಂಡು ಮಾತನಾಡಲು ಆರಂಭಿಸಿದ್ದಾರೆ. ಮೊದಲು ಸ್ನೇಹಿತರಾಗಿದ್ದ ಮೂವರು, ತದನಂತರ ಒಬ್ಬರನ್ನೊಬ್ಬರು ಪ್ರೀತಿಸಲು ಶುರುವಿಟ್ಟುಕೊಂಡಿದ್ದಾರೆ. ವಿಶೇಷ ಎಂದರೆ ಇಬ್ಬರು ಸಹೋದರಿಯ ಓರ್ವನನ್ನೇ ಪ್ರೀತಿಸುತ್ತಿದ್ದರು. ಆತನ ಭೇಟಿ ಮಾಡಲು ನಿರ್ಧರಿಸಿ, ಮನೆಯಿಂದ ತೆರಳಿದ್ದರು ಎಂದು ತಿಳಿಸಿದ್ದಾರೆ.